ಬೆಂಗಳೂರು: ಜನಪರವಾಗಿರುವ ಪಾದಯಾತ್ರೆ ಅಲ್ಲ, ಅಲುಗಾಡುತ್ತಿರುವ ಸ್ಥಾನಕ್ಕಾಗಿ ಪಾದಯಾತ್ರೆ ಎಂದು ಸಚಿವ ಎಚ್‌ಸಿ ಮಹದೇವಪ್ಪ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಅಲುಗಾಡುತ್ತಿರುವ ತಮ್ಮ ವಿಪಕ್ಷ ನಾಯಕನ ಸ್ಥಾನ ಮತ್ತು ರಾಜ್ಯಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಏನು ಮಾಡಬೇಕೆಂದು ತಿಳಿಯದೇ ಹತಾಶರಾಗಿರುವ ಆರ್ ಅಶೋಕ್ ಮತ್ತು ವಿಜಯೇಂದ್ರ ಅವರು ಪಾದಯಾತ್ರೆಯನ್ನು ಘೋಷಣೆ ಮಾಡಿಕೊಂಡಿದ್ದು ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಲ್ಲೇ ಅಪಸ್ವರ ಎದ್ದಿದೆ. ನಿಜವಾಗಿಯೂ ಇದು ಜನಪರವಾಗಿರುವ ಪಾದಯಾತ್ರೆ ಅಲ್ಲ. ಬದಲಿಗೆ ಆರ್ ಅಶೋಕ್ ಮತ್ತು ವಿಜಯೇಂದ್ರ ಅವರ ಅಸ್ತಿತ್ವ ಉಳಿಸಿಕೊಳ್ಳುವ ಯಾತ್ರೆ ಎಂದಿದ್ದಾರೆ.