Home ಅಪರಾಧ ಅಬ್ದುಲ್ ರೆಹ್ಮಾನ್ ಕೊಲೆ: ಮೂವರ ಬಂಧನ

ಅಬ್ದುಲ್ ರೆಹ್ಮಾನ್ ಕೊಲೆ: ಮೂವರ ಬಂಧನ

0

ಮಂಗಳೂರು: ಬಂಟ್ವಾಳ ಕುರಿಯಾಳದ ಇರಾಕೋಡಿ ಎಂಬಲ್ಲಿ ಮೇ ೨೭ ರಂದು  ನಡೆದ ಅಬ್ದುಲ್ ರಹಿಮಾನ್ ಕೊಲೆ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣದಕ್ಕೆ ಸಂಬಂಧಿಸಿ ಪೊಲೀಸರು ಮೇ ೨೯ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಕುರಿಯಾಳ ಗ್ರಾಮದ ಮುಂಡರಕೋಡಿಯ ದೀಪಕ್ ಪೂಜಾರಿ(೨೧),ಬಂಟ್ವಾಳದ ಅಮ್ಮುಂಜೆ ಗ್ರಾಮದ ಪ್ರಥ್ವಿರಾಜ್ ಜೋಗಿ (೨೧) ಮತ್ತು ಅಮ್ಮುಂಜೆ ಗ್ರಾಮದ ಚಿಂತನ್ ಬೆಳ್ಚಡ (೧೯) ಎನ್ನುವವರಾಗಿದ್ದಾರೆ.
ಮೂವರನ್ನು ಬಂಟ್ವಾಳದ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಬಂಧಿಸಲಾಗಿದೆ. ಪ್ರಕರಣದ ತನಿಖೆಗಾಗಿ ೫ ಪೊಲೀಸರ ತಂಡಗಳನ್ನು ರಚಿಸಲಾಗಿದ್ದು ತನಿಖೆ ಮುಂದುವರಿದಿದೆ. ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version