Home ನಮ್ಮ ಜಿಲ್ಲೆ ಧಾರವಾಡ ಅನುಮತಿ ಪಡೆದು ಧಾರವಾಡದಿಂದಲೇ ಸ್ಪರ್ಧೆ: ವಿನಯ ಕುಲಕರ್ಣಿ

ಅನುಮತಿ ಪಡೆದು ಧಾರವಾಡದಿಂದಲೇ ಸ್ಪರ್ಧೆ: ವಿನಯ ಕುಲಕರ್ಣಿ

0

ಧಾರವಾಡ : ಧಾರವಾಡ ಜಿಲ್ಲೆಗೆ ನಿರ್ಬಂಧ ಇದ್ದರೂ, ನ್ಯಾಯಾಲಯದ ಅನುಮತಿ ಪಡೆದು ಚುನಾವಣೆಗೆ ನಿಲ್ಲುವೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ಧಾರೆ. ಚನ್ನಮ್ಮನ ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಹಾವೇರಿ ಜಿಲ್ಲೆಯ ಶಿಗ್ಗಾವಿ, ಬೆಳಗಾವಿ ಜಿಲ್ಲೆಯ ಕಿತ್ತೂರು ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಆಹ್ವಾನವಿದೆ. ಆದರೆ ನನ್ನ ಕ್ಷೇತ್ರದ ಜನರ ಸೇವೆ ಮಾಡುವ ಇಂಗಿತ ಹೊಂದಿದ್ದೇನೆ. ಹೀಗಾಗಿ ಧಾರವಾಡದಿಂದಲೇ ಸ್ಪರ್ಧಿಸುವೆ’ ಎಂದರು. ಜನರ ಅಭಿಮಾನ ನನ್ನ ಮೇಲೆ ಬಹಳಷ್ಟಿದೆ. ಕ್ಷೇತ್ರದಲ್ಲಿ ಆಕಾಂಕ್ಷಿಗಳು ಇರುವುದು ಸಹಜವಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗೊಲ್ಲಾ, ಜಿಲ್ಲೆಗೆ ಬರದಂತೆ ನ್ಯಾಯಾಲಯ ನಿರ್ಬಂಧವಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ ಎಂದು ಹೇಳಿದ್ಧಾರೆ.

Exit mobile version