Home News SK IMPACT: ಆಧಾರ್ ಕೇಂದ್ರ ಮರು ಪ್ರಾರಂಭ

SK IMPACT: ಆಧಾರ್ ಕೇಂದ್ರ ಮರು ಪ್ರಾರಂಭ

ಬಾಗಲಕೋಟೆ(ಕುಳಗೇರಿ ಕ್ರಾಸ್): ಇಲ್ಲಿಯ ನಾಡ ಕಾರ್ಯಾಲಯದಲ್ಲಿ ಆಧಾರ್ ಆಪರೇಟರ್ ಐ.ಡಿ ಬಂದ್ ಮಾಡಲಾಗಿದೆ. ಆಧಾರ್ ಕೇಂದ್ರ ಪ್ರಾರಂಭವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಆಧಾರ್ ಕಾರ್ಡ್ ಸಮಸ್ಯೆ ಇದ್ರೆ ಬಾದಾಮಿ ಅಥವಾ ಕೆರೂರ ಹೋಗಿ ಎಂದು ಹೇಳಲಾಗುತ್ತಿದ್ದ ನಾಡ ಕಾರ್ಯಾಲಯಕ್ಕೆ ಭೇಟಿ ಕೊಟ್ಟ ನಮ್ಮ ವರದಿಗಾರರು ಸುದ್ದಿ ಮಾಡುವ ಮೂಲಕ ಅಧಿಕಾರಿಗಳನ್ನ ಎಚ್ಚರಗೊಳಿಸಿದ್ದರು.
40 ಗ್ರಾಮಗಳನ್ನ ಹೊಂದಿದ ಈ ಹೋಬಳಿ ಕೇಂದ್ರದಲ್ಲಿನ ಆಧಾರ್ ಕೇಂದ್ರ ರದ್ದುಗೊಳಿಸಿದರೆ ಸಾರ್ವಜನಿಕರಿಗೆ ಆಗುವ ತೊಂದರೆ ಕುರಿತು ಸಂಪೂರ್ಣ ಮಾಹಿತಿ ಪಡೆದು ಜುಲೈ 4ರಂದು ಸಂಯುಕ್ತ ಕರ್ನಾಟಕ ಸುದ್ದಿ ಬಿತ್ತರಿಸಿತ್ತು. ವರದಿಗೆ ಎಚ್ಚೆತ್ತ ಕಂದಾಯ ಅಧಿಕಾರಿಗಳು ಆಧಾರ್ ಕೇಂದ್ರ ಮರು ಪ್ರಾರಂಭಿಸಿ ಜನರ ಸೇವೆಗೆ ಮುಂದಾಗಿದ್ದಾರೆ. ಆಧಾರ್ ಕೇಂದ್ರ ಮರು ಪ್ರಾರಂಭಿಸಿದ್ದರಿಂದ ಸುತ್ತ ಗ್ರಾಮಗಳ ಸಾರ್ವಜನಿಕರು ಸಂತಸಗೊಂಡಿದ್ದಾರೆ.
ಆಧಾರ್ ಕೇಂದ್ರ ಮರು ಪ್ರಾರಂಭಿಸುವಂತೆ ಪತ್ರಿಕೆಯಲ್ಲಿನ ಸುದ್ದಿ ಗಮನಿಸಿದ ನೂತನ ತಹಶೀಲ್ದಾರ್ ಕಾವ್ಯಾಶ್ರೀ .ಎಚ್ ಅವರು ಮೇಲಧಿಕಾರಿಗಳ ಗಮನಕ್ಕೆ ತಂದು ನಾಡ ಕಾರ್ಯಾಲಯದಲ್ಲಿನ ಆಧಾರ್ ಕೇಂದ್ರ ಪ್ರಾರಂಭಿಸುವಂತೆ ಉಪ ತಹಶೀಲ್ದಾರ್ ಮೊಮೀನ್ ಅವರಿಗೆ ಸೂಚಿಸಿದ್ದರಿಂದ ಇಂದು ಆಧಾರ್ ಕೇಂದ್ರ ಪ್ರಾರಂಭಿಸಲಾಗಿದೆ.
ಕಳೆದ ಒಂದು ವಾರದಲ್ಲಿ ನಮ್ಮ ಪತ್ರಿಕೆಯಲ್ಲಿ ಪ್ರಸಾರವಾದ ಸುದ್ದಿಗಳನ್ನ ಗಮನಿಸಿ ವಿಕಲಚೇತನ ಐಶ್ವರ್ಯ ಹಿರ್ಲವರ ಆಧಾರ್ ಸಮಸ್ಯೆ ಸರಿಪಡಿಸಿ ಹಾಗೂ ರದ್ದುಗೊಳಿಸಿದ್ದ ಆಧಾರ್ ಕೇಂದ್ರ ಮರು ಪ್ರಾರಂಭಿಸುವ ಮೂಲಕ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ಕಾವ್ಯಾಶ್ರೀ .ಎಚ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Exit mobile version