Home ತಾಜಾ ಸುದ್ದಿ 23 ವಯಸ್ಸಿನ ಕುವರಿ ಬಳ್ಳಾರಿ ಮೇಯರ್

23 ವಯಸ್ಸಿನ ಕುವರಿ ಬಳ್ಳಾರಿ ಮೇಯರ್

0


ಬಳ್ಳಾರಿ: ಮಹಾನಗರ ಪಾಲಿಕೆಯ ೩೧ನೆಯ ಅವಧಿಯ ಮೇಯರ್ ಆಗಿ ಕಾಂಗ್ರೆಸ್‌ನ ಅತಿ ಕಿರಿಯ ಸದಸ್ಯೆ ೨೩ ವರ್ಷದ ಬಿ.ತ್ರಿವೇಣಿ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ೩೩ನೇ ವಾರ್ಡಿನ ಜಾನಕಮ್ಮ ಆಯ್ಕೆಯಾಗಿದ್ದಾರೆ.
ಮೇಯರ್ ಎಸ್‌ಸಿ, ಉಪ ಮೇಯರ್ ಎಸ್‌ಟಿಗೆ ಮೀಸಲಾಗಿತ್ತು. ತ್ರ‍್ರಿವೇಣಿ ಅವರ ತಾಯಿ ಸುಶೀಲಾ ಬಾಯಿ ಅವರು ೨೦೧೮-೧೯ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ವಿ. ತ್ರಿವೇಣಿ ಅವರು ಆಯ್ಕೆಯಾಗುವ ಮೂಲಕ ಕಮೇಲ ಸೂರಿ ಅವರ ಕುಟುಂಬ ಬಳ್ಳಾರಿ ನಗರಕ್ಕೆ ಇಬ್ಬರು ಮೇಯರ್ ಆಗಿ ಆಯ್ಕೆಯಾಗಿರುವುದು ವಿಶೇಷ.
ತ್ರಿ ವೇಣಿ ಅವರು ಆರೋಗ್ಯ ನಿರೀಕ್ಷಕ ಶಿಕ್ಷಣ ಪೂರೈಕೆ ಮಾಡಿದ್ದು, ೨೦೨೦ರಲ್ಲಿ ಪಾಲಿಕೆ ಚುನಾವಣೆ ನಡೆದಾಗ ಅತಿ ಕಿರಿಯ ವಯಸ್ಸಿನ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Exit mobile version