Home ತಾಜಾ ಸುದ್ದಿ ಗಡಿಪಾರಿನಿಂದ ತಾತ್ಕಾಲಿಕ ರಿಲ್ಯಾಕ್ಸ್

ಗಡಿಪಾರಿನಿಂದ ತಾತ್ಕಾಲಿಕ ರಿಲ್ಯಾಕ್ಸ್

0
MANJUNATH HARLAPUR

ಹುಬ್ಬಳ್ಳಿ: ಧಾರವಾಡ ಎಸಿ ಅಶೋಕ ತೇಲಿ ಮಾಡಿದ್ದ ಗಡಿಪಾರು ಆದೇಶವನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸದ ಧಾರವಾಡ ಹೈಕೋರ್ಟ್, ಮರು ವಿಚಾರಣಾ ಅರ್ಜಿ ಸಲ್ಲಿಸಲು ೧೦ ದಿನಗಳ ಗಡುವು ನೀಡಿ ಆದೇಶ ಹೊರಡಿಸಿದೆ.

ಪಡಿತರ ಅಕ್ಕಿ ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದ ಉದ್ಯಮಿ ಮಂಜುನಾಥ ಹರ್ಲಾಪುರ ಗಡಿಪಾರು ಆದೇಶವನ್ನು ರದ್ದುಗೊಳಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್, ಅಗತ್ಯ ವಸ್ತು ಕಾಯ್ದೆ ಅಡಿ ಅರ್ಜಿಯನ್ನು ಪರಿಶೀಲಿಸಿದ್ದು, ಆದೇಶ ತಲುಪಿದ ೧೦ ದಿನದೊಳಗೆ ಮೇಲ್ಮನವಿ ಸಲ್ಲಿಸಲು ಅರ್ಜಿದಾರಗೆ ಕಾಲಾವಕಾಶ ನೀಡಿದೆ. ಅಲ್ಲಿಯವರೆಗೆ ಗಡಿಪಾರು ಆದೇಶ ಜಾರಿ ಮಾಡುವಂತಿಲ್ಲ ಎಂದು ಅದೇಶದಲ್ಲಿ ಸಪಷ್ಟಪಡಿಸಿದೆ.

Exit mobile version