Home ನಮ್ಮ ಜಿಲ್ಲೆ ಗದಗ ಸ್ವಾರಿ ಬ್ರದರ್‌ ಎಂದ ಪ್ರತಾಪ್‌ ಸಿಂಹ: ವಾರೇ ವ್ಹಾ ಎಂದ ನೆಟ್ಟಿಗರು

ಸ್ವಾರಿ ಬ್ರದರ್‌ ಎಂದ ಪ್ರತಾಪ್‌ ಸಿಂಹ: ವಾರೇ ವ್ಹಾ ಎಂದ ನೆಟ್ಟಿಗರು

0

ಗದಗ: ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಇತ್ತಿಚೆಗೆ ಕೇಂದ್ರ ಸಚಿವ ಅಮಿತ್ ಶಾ ಸಮಾವೇಶದ ವೇಳೆ ಸಾವಿರಾರು ರೂಪಾಯಿ ನಷ್ಟ ಅನುಭವಿಸಿದ್ದ ಸಮೀರ್ ಹಸನ್ ಅವರ ನೆರವಿಗೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಸ್ಪಂದಿಸಿದ್ದಾರೆ, ಅಂದು ಸಾವಿರಾರು ಕಾರ್ಯಕರ್ತರು ಭಾಗಿಯಾದ ಸಮಾವೇಶದಲ್ಲಿ ನೀರಿನ ವ್ಯವಸ್ಥೆ ಸರಿಯಾಗಿರಲಿಲ್ಲ. ಜನ ಬಿಸಿಲಿನ ಬೇಗೆಗೆ ತುಂಬ ಬಾಯಾರಿಕೆಯಿಂದ ನೀರಿಗಾಗಿ ಪರದಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಸಮೀರ್ ಹಸನ್​ ಸಾವ್ ಎನ್ನುವವರು ಕೂಲ್ ಡ್ರಿಂಕ್ಸ್​ ಇರುವ ವಾಹನ ಸಮಾವೇಶದ ಬಳಿ ವ್ಯಾಪಾರಕ್ಕೆ ತಗೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಆಯೋಜಕರೇ ಕೂಲ್​ ಡ್ರಿಂಕ್ಸ್ ಹಾಗೂ ನೀರಿನ ಬಾಟಲ್‌ಗಳನ್ನು ತರಿಸಿದ್ದಾರೆ ಎಂದು ತಿಳಿದ ಜನ ಸಮೀರ್​ ವಾಹನಕ್ಕೆ ಮುಗಿಬಿದ್ದು, ಕೂಲ್​ ಡ್ರಿಂಕ್ಸ್, ಜ್ಯೂಸ್, ನೀರಿನ ಬಾಟಲ್​ ತಗೆದುಕೊಂಡು ಹೋಗ ತೊಡಗಿದ್ದರು ಅವರನ್ನು ತಡೆಯುವಲ್ಲಿ ರೋಷಿಹೊಗಿದ್ದ ಸಮೀರ್‌ ಹತಾಶೆಯಿಂದ ಕಣ್ಣಿರ ಹಾಕಬೇಕಾಯಿತು ಯಾರೋಇದನ್ನು ವಿಡಿಯೋ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ, ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಕೋಲ್ಡ್‌ ಡ್ರಿಂಕ್ಸ್‌ ವ್ಯಾಪಾರಿ ಸಮೀರ್ ಹಸನ್​ ಸಾವ್ ನೆರವಿಗೆ ಧಾವಿಸಿದ್ದಾರೆ. ವ್ಯಾಪಾರಿ ಸಮೀರ್​ ಅಕೌಂಟ್​ಗೆ 35 ಸಾವಿರ ರೂಪಾಯಿ ಟ್ರಾನ್ಸ್​ಫರ್ ಮಾಡಿರುವ ಪ್ರತಾಪ್‌ ಸಿಂಹ ಸ್ವಾರಿ ಬ್ರದರ್‌ ಎಂದು ಕ್ಷಮೆಯಾಚಿಸಿದ್ದಾರೆ. ಈ ಮೂಲಕ ಪ್ರತಾಪ್ ಸಿಂಹ ಮಾನವೀಯತೆ ಮರೆದಿದ್ದಾರೆ. ಈ ವಿಚಾರವನ್ನು ಪ್ರತಾಪ್ ಸಿಂಹ ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನೆಟ್ಟಿಗರು ಪ್ರತಾಪ್‌ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದೀರಿ. ಶ್ಲಾಘನೀಯ ಕಾರ್ಯ ಈ ರೀತಿ ಇಚ್ಛಾಶಕ್ತಿಯನ್ನು ಹೊಂದಿರುವವರು ಜೀವನದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯುವವರು ಎಂದಿದ್ದಾರೆ.

Exit mobile version