Home ತಾಜಾ ಸುದ್ದಿ ಸಿಎಂ ಪತ್ರಿಕಾ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಅವರನ್ನ ನೆನೆದು ಭಾವುಕರಾದ; ಸಿಎಂ ಬೊಮ್ಮಾಯಿ..!

ಸಿಎಂ ಪತ್ರಿಕಾ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಅವರನ್ನ ನೆನೆದು ಭಾವುಕರಾದ; ಸಿಎಂ ಬೊಮ್ಮಾಯಿ..!

0

ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಸಿಎಂ ಪತ್ರಿಕಾ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಅವ್ರ ಶ್ರದ್ದಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಂಧಿಭವನದಲ್ಲಿ ನಡೆದ ಪ್ರೋಗ್ರಾಂನಲ್ಲಿ ಸಿಎಂ ಬೊಮ್ಮಾಯಿ, ಗುರುಲಿಂಗಸ್ವಾಮಿ ಅವ್ರನ್ನ ನೆನೆದು ಭಾವುಕರಾಗಿದ್ದಾರೆ.

ನನ್ನ ಜೊತೆ ನಿತ್ಯ ಮಾತಾಡ್ತಿದ್ರು. ಅವರ ಅಗಲಿಕೆ ಇಂದ ಅವರ ಕುಟುಂಬ ಬಿಟ್ಟರೆ ನನಗೆ ಹೆಚ್ಚು ನಷ್ಟವಾಗಿದೆ. ಅವ್ರ ಕುಟುಂಬದ ಜೊತೆಗೆ ನಾವೆಲ್ಲಾ ಇದ್ದೇವೆ. ಅವರ ಕುಟುಂಬದ ಜೊತೆ ಪ್ರಮಾಣಿಕವಾಗಿ ಇರೋಣ. ಒಳ್ಳೆಯ ಕಿರಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಅವರ ಕುಟುಂಬಕ್ಕೆ ದೇವರು ಶಕ್ತಿ ತುಂಬಲಿ ಅಂತ ಕೇಳಿಕೊಳ್ತೇನೆ ಎಂದು ಹೇಳಿದ್ದಾರೆ.

Exit mobile version