Home News ಶಿವಮೊಗ್ಗ: ಹೃದಯಾಘಾತಕ್ಕೆ ಎರಡು ದಿನದಲ್ಲಿ ನಾಲ್ವರು ಬಲಿ

ಶಿವಮೊಗ್ಗ: ಹೃದಯಾಘಾತಕ್ಕೆ ಎರಡು ದಿನದಲ್ಲಿ ನಾಲ್ವರು ಬಲಿ

ಶಿವಮೊಗ್ಗ: ಹೃದಯಾಘಾತಕ್ಕೆ ಸಂಬಂಧಿಸಿದಂತೆ ಭಾನುವಾರ ಮತ್ತು ಸೋಮವಾರದಲ್ಲಿ ನಾಲ್ಕು ಸಾವಾಗಿದೆ. 21 ವರ್ಷದ ಯುವಕ, 23 ವರ್ಷದ ವಿವಾಹಿತ ಮಹಿಳೆ ಮತ್ತು ವೈದ್ಯರೋರ್ವರು ಹಾಗೂ 52 ವರ್ಷದ ಮಹಿಳೆ ಬಲಿಯಾಗಿದ್ದಾರೆ.
ಶಿವಮೊಗ್ಗದಲ್ಲೂ ಜೂನ್ ತಿಂಗಳಲ್ಲಿ ತಿಂಗಳ ಕೊನೆಯ ಎರಡು ದಿನಗಳಲ್ಲಿ ನಾಲ್ವರ ಸಾವಾಗಿದೆ. ಅದೂ ಹದಿಹರೆಯದ ಯುವಕ-ಯುವತಿಯರು ಸಾವಾಗುತ್ತಿರುವುದು ಅಚ್ಚರಿ ಮೂಡಿಸಿದೆ.
ಭಾನುವಾರ ಶ್ರೀನಿಧಿ ಎಂಬ 21 ವರ್ಷದ ಡಿವಿಎಸ್ ಕಾಲೇಜಿನ ಅಂತಿಮ ವರ್ಷದ ಪದವಿಯ ಯುವಕ ಹೃದಯಾಘಾತದಿಂದ ಸಾವಾಗಿದೆ. ಬಸವಗಂಗೂರಿನ ನಿವಾಸಿ ಶ್ರೀನಿಧಿಗೆ ದಿಢೀರ್ ಎಂದು ಹೃದಯಾಘಾತ ಕಾಣಿಸಿಕೊಂಡು ಸಾವಾಗಿರುವುದಾಗಿ ತಿಳಿದು ಬಂದಿದೆ.
ನಿನ್ನೆ ಜಿಲ್ಲೆಯಲ್ಲಿ ಎರಡು ಸಾವಾಗಿದೆ. ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಸಂದೀಪ (40) ಹೃದಯಾಘಾತದಿಂದ ಸಾವಾಗಿದೆ. ಅದರ ಜೊತೆಗೆ ನಿನ್ನೆ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ವಿವಾಹಿತ ಮಹಿಳೆ ಹರ್ಷಿತಾ ಬಲಿಯಾಗಿದ್ದಾಳೆ.
ಹರ್ಷಿತಾ (23) ಹಾಸನ ಜಿಲ್ಲೆಯ ಯುವಕನಿಗೆ ಮದುವೆಯಾಗಿದ್ದರು. ಏ. 5ರಂದು ಎರಡನೇ ಹೆರಿಗೆಗೆ ಶಿವಮೊಗ್ಗ ಜಿಲ್ಲೆಯ ಆಯನೂರು ಹೋಬಳಿಯ ಮಂಡಘಟ್ಟ ತಾಲೂಕಿನ ದ್ಯಾವನ ಕೆರೆಯಲ್ಲಿರುವ ತವರು ಮನೆಗೆ ಬಂದಿದ್ದರು. ಮೇ 24ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಮಗುವಿಗೆ ಜನ್ಮ ನೀಡಿ 34 ದಿನಗಳ ಅಂತರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಿನ್ನೆ ಶಿವಮೊಗ್ಗದ ಮೆಗ್ಗಾನ್‌ಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲಿ ಸಾವಾಗಿಗೆ. ಹರ್ಷಿತಾ ಬಾಣಂತಿಯಾಗಿಯೂ ಸಾವಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯಘಾತದಿಂದ ಸರಣಿ ಸಾವು ಮುಂದುವರಿದಿದ್ದು, ಹೃದಯಾಘಾತದಿಂದ ಮತ್ತೊಬ್ಬ ಮಹಿಳೆ ನಿಧನರಾಗಿದ್ದಾರೆ. ಚಿಕ್ಕಮ್ಮನ ಮಗನ ಅಂತ್ಯಕ್ರಿಯೆಗೆ ತೆರಳಿದ್ದ ಮಹಿಳೆಯು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಚೈತ್ರಾ (52) ಮೃತ ದುರ್ದೈವಿ.

Exit mobile version