Home ತಾಜಾ ಸುದ್ದಿ ಶಾಲಾ ಕಟ್ಟಡದಲ್ಲಿ ಬೆಂಕಿ: ವಿದ್ಯಾರ್ಥಿಗಳು ಪಾರು

ಶಾಲಾ ಕಟ್ಟಡದಲ್ಲಿ ಬೆಂಕಿ: ವಿದ್ಯಾರ್ಥಿಗಳು ಪಾರು

0

ಬಳ್ಳಾರಿ: ಶಾಲೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಶಾಲಾ ಸಿಬ್ಬಂದಿ ಮುನ್ನೆಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಸುದೀಕ್ಷಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಈ ಅವಘಡ ನಡೆದಿದೆ.

ಶಾಲೆಯಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾದ್ದರಿಂದ ಜನರೇಟರ್ ಆನ್ ಮಾಡಲಾಗಿತ್ತು. ಆಗ ಜನರೇಟರ್ ಕೊಠಡಿಯಲ್ಲಿ ಮೊದಲು ಬೆಂಕಿ ಹತ್ತಿಕೊಂಡಿದೆ. ಜನರೇಟರ್ ಕೊಠಡಿ ಹೊತ್ತಿ ಉರಿಯುತ್ತಲೇ ಶಾಲಾ ಸಿಬ್ಬಂದಿ ಶಾಲೆಯ ಒಳಗಿದ್ದ 150 ಮಕ್ಕಳನ್ನ ಹಿಂಬಾಗಿಲಿನಿಂದ ಹೊರಗಡೆ ಕಳಿಸಿ ರಕ್ಷಣೆ‌ ಮಾಡಿದ್ದಾರೆ.

Exit mobile version