Home ತಾಜಾ ಸುದ್ದಿ ರೋಹಿಣಿ ವಿರುದ್ಧ ರೂಪಾ ಮತ್ತೆ ವಾಗ್ದಾಳಿ

ರೋಹಿಣಿ ವಿರುದ್ಧ ರೂಪಾ ಮತ್ತೆ ವಾಗ್ದಾಳಿ

0

ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆಯ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಾನು ಸತ್ಯವನ್ನೇ ಟ್ವೀಟ್ ಮಾಡಿದ್ದೇನೆ. ಕಳೆದ ಒಂದು ತಿಂಗಳಿಂದ ನನ್ನ ಗಮನಕ್ಕೆ ಬಂದಿದೆ. ಈಗ ಹೇಳುತ್ತಿದ್ದೇನೆ ಎಂದಿದ್ದಾರೆ.
ಇನ್ನು ಶಾಸಕರ ಜೊತೆ ರಾಜೀ ಸಂಧಾನ ಯಾಕೆ ಮಾಡಬೇಕು? ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ಐಎಎಸ್‌ ಅಧಿಕಾರಿಯೊಬ್ಬರು ರಾಜಕಾರಣಿ ಬಳಿ ಸಂಧಾನಕ್ಕೆ ಹೋಗಿದ್ದನ್ನು ಕೇಳಿದ್ದೇನೆ. ಇದು ತುಂಬಾ ಬೇಸರದ ಸಂಗತಿ. ರೋಹಿಣಿ ಸಂಧಾನಕ್ಕೆ ಹೋಗಿರುವ ಉದ್ದೇಶವಾದರೂ ಏನು? ಯಾವ ವಿಷಯವನ್ನು ಮುಚ್ಚಿಡುತ್ತಿದ್ದಾರೆ? ಭ್ರಷ್ಟಾಚಾರವೋ? ಅಥವಾ ಬೇರೆ ಇನ್ನೇನನ್ನೋ? ಎಂದು ಅವರು ಪ್ರಶ್ನಿಸಿದ್ದಾರೆ.
ಹಲವಾರು ಆರೋಪಗಳು ರೋಹಿಣಿ ವಿರುದ್ಧವಿದೆ. ಪ್ರತಿ ಬಾರಿ ಅವರನ್ನು ರಕ್ಷಿಸುತ್ತಿರುವುದು ಯಾರು? ನನ್ನ ಬಳಿ ಇರುವ ಎಲ್ಲಾ ದಾಖಲೆ, ಫೋಟೋಗಳನ್ನು ಸರ್ಕಾರಕ್ಕೆ ಕೊಡುತ್ತೇನೆ. ಈ ಬಗ್ಗೆ ತನಿಖೆಯಾಗಲಿ ಎಂದರು.

Exit mobile version