Home ತಾಜಾ ಸುದ್ದಿ ರಮೇಶನಿಂದ ಬಿಜೆಪಿಗೆ ಉಳಿಗಾಲವಿಲ್ಲ

ರಮೇಶನಿಂದ ಬಿಜೆಪಿಗೆ ಉಳಿಗಾಲವಿಲ್ಲ

0

ಅಥಣಿ: ಬನ್ನಿ ರಮೇಶ ಜಾರಕಿಹೊಳಿ ಅವರೇ ಅಥಣಿಗೆ, ನಿಮಗೆ ಒಂದು ಮನೆ ಮಾಡಿ ಕೊಡುತ್ತೇನೆ, ಇಲ್ಲವಾದರೆ ನಮ್ಮದೆ ಮನೆಯ ಒಂದು ಭಾಗ ಬಿಟ್ಟು ಕೊಡುತ್ತೇನೆ ಬನ್ನಿ ನಿಮಗೆ ಸ್ವಾಗತ ಎಂದು ಅಥಣಿಯಲ್ಲಿ ಕೈ ಅಭ್ಯರ್ಥಿ ಲಕ್ಷ್ಮಣ ಸವದಿ ಸವಾಲು ಹಾಕಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಥಣಿಯಲ್ಲಿ ಯಾರ ಗೆಲುವು ಎಂಬುದು ಜನರು ತೀರ್ಮಾನ ಮಾಡುತ್ತಾರೆ. ನನಗೆ ರಮೇಶ್ ಪೀಡೆ ಎಂದಿದ್ದಾರೆ. ಪೀಡೆ ಯಾರು ಎಂಬುದು ಗೊತ್ತಿದೆ, 21 ವರ್ಷದಿಂದ ನಾನು ಒಂದೇ ಪಕ್ಷದಲ್ಲೇ ಇದ್ದೆ. ಇಂತಹ ಮಹಾನ್‌ಭಾವನಿಂದ ಪಕ್ಷ ಬಿಟ್ಟಿದ್ದೇನೆ. ರಮೇಶ್ ಜಾರಕಿಹೊಳಿ ಬಳು ಇದ್ದ ಹಾಗೆ ಈ ಹಿಂದೆ ಇವನಿಂದ ಕಾಂಗ್ರೆಸ್ ಪಕ್ಷಕ್ಕೆ ಅಳಿಗಾಲ ಬಂದಿತ್ತು. ಇನ್ನೂ ಮುಂದೆ ಬಿಜೆಪಿಗೆ ಅಳಿಗಾಲ ಬರಲಿದೆ ನೋಡ್ತಾಯಿರಿ ಎಂದು ಏಕವಚನದಲ್ಲೇ ಟಾಂಗ್ ನೀಡಿದರು.
ಇನ್ನು ಮುಂದೆ ನಾನು ಬಿಜೆಪಿ ನಾಯಕರ ಬಗ್ಗೆ ಮಾತನಾಡುವುದಿಲ್ಲ, ಟೀಕೆ ಮಾಡಲ್ಲ. ನನ್ನ ಬಗ್ಗೆ ಯಾರೂ ಏನೂ ಬೇಕಾದರೂ ಮಾತನ್ನಾಡಲಿ ನಾನು ಮಾತ್ರ ಮಾತ್ನಾಡಲ್ಲ, ಜಗದೀಶ್ ಶೆಟ್ಟರ್ ಅವರ ಮನೆತನವೇ ಪಕ್ಷಕ್ಕೆ ಮೀಸಲು ಇಟ್ಟು ತಳಮಟ್ಟದಿಂದ ಸಿಎಂ ಸ್ಥಾನದವರೆಗೆ ಕೆಲಸ ಮಾಡಿದ್ದರೂ ಕೂಡ ಅವರಿಗೆ ಟಿಕೆಟ್ ಕೊಡುತ್ತಿಲ್ಲ ಎಂಬುದು ಅಚ್ಚರಿಯಾಗಿದೆ. ನಾನು ಪಕ್ಷವನ್ನು ಬಿಟ್ಟು ಬಂದಿದ್ದೇನೆ, ಇನ್ನೂ ಮುಂದೆ ಬಿಜೆಪಿ ಬಗ್ಗೆ ಮಾತನಾಡಲ್ಲ ಎಂದರು.

Exit mobile version