Home ತಾಜಾ ಸುದ್ದಿ ಮಾಚಕನೂರ ದೇವಾಲಯ ಜಲಾವೃತ

ಮಾಚಕನೂರ ದೇವಾಲಯ ಜಲಾವೃತ

0
ಮಾಚಕನೂರ ದೇವಾಲಯ

ಬಾಗಲಕೋಟೆ(ಮುಧೋಳ): ನಗರದಲ್ಲಿ ಹಾಗೂ ಬೆಳಗಾವಿ ಪರಿಸರದಲ್ಲಿ ಸತತ ಸುರಿಯುತ್ತಿರುವ ಮಳೆಯಿಂದ ಹಾಗೂ ಹಿಡಕಲ್ ಜಲಾಶಯದಿಂದ ಹೆಚ್ಚಿನ ನೀರು ಹರಿ ಬಿಟ್ಟಿದ್ದರ ಪರಿಣಾಮ ಘಟಪ್ರಭಾ ನದಿಗೆ ಮತ್ತೆ ಪ್ರವಾಹದ ಭೀತಿ ಉಂಟಾಗಿದೆ.
ಈ ಭಾಗದ ಭಕ್ತರ ಆರಾದ್ಯ ದೇವತೆ ಮಾಚಕನೂರಿನ ಹೊಳೆಬಸವೇಶ್ವರ ದೇವಾಲಯ ಹಿನ್ನೀರಿನಿಂದ ಸುತ್ತುವರೆದಿದೆ. ತಾಲೂಕಿನಲ್ಲಿ ಒಟ್ಟು 57 ಮನೆಗಳು ಮಳೆಯಿಂದ ಬಿದ್ದಿವೆ. ಇದೇ ರೀತಿ ಮಳೆಯ ಅಬ್ಬರ ಮುಂದುವರೆದರೆ ಇನ್ನು ಹೆಚ್ಚು ಮನೆಗಳು ಬೀಳುವ ಸಾಧ್ಯತೆಗಳಿವೆ.
ಪ್ರವಾಹ ಪರಿಸ್ಥಿತಿ ಎದುರಿಸಲು 23 ಗ್ರಾಮ ಪಂಚಾಯತಿಗಳಿಗೆ ತಾಲೂಕ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

Exit mobile version