Home ಅಪರಾಧ ಭೀಮಾ ತೀರದಲ್ಲಿ ಮತ್ತೊಂದು ಬರ್ಬರ ಹತ್ಯೆ

ಭೀಮಾ ತೀರದಲ್ಲಿ ಮತ್ತೊಂದು ಬರ್ಬರ ಹತ್ಯೆ

0

ಕಲಬುರಗಿ: ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತಿ ಸದಸ್ಯನ ಭೀಕರ ಕೊಲೆಯ ಘಟನೆ ಮರೆಮಾಚುವ ಮುನ್ನವೇ ತಾಲೂಕಿನ ಸೀಧನೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ಕೊಲೆ ನಡೆದಿದೆ.
ಸೀಧನೂರ ಗ್ರಾಮದ ಬಲಭೀಮ ಸಗರ (23) ಎಂಬ ಯುವಕ ಕೊಲೆಗೀಡಾದ್ದು, ಕೆಲ ದಿನಗಳ ಹಿಂದೆ ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದ. ಕಲಬುರಗಿ ನಗರದಲ್ಲಿ ವಾಸವಾಗಿದ್ದ.
ದಸರಾ ಹಬ್ಬದ ನಿಮಿತ್ತ ಗ್ರಾಮಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಬರ್ಬರವಾಗಿ ಹತ್ಯೆಯಾಗಿ ಯಾಗಿದ್ದಾನೆ. ಹಳೇ ವೈಷ್ಯಮ್ಯ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ರೇವೂರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

https://samyuktakarnataka.in/ಭೀಮಾ-ತೀರದಲ್ಲಿ-ಮತ್ತೊಂದು-ಬ/

Exit mobile version