Home ನಮ್ಮ ಜಿಲ್ಲೆ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಗಾಗಿ ಮೊಬೈಲ್ ಟವರ್ ಏರಿದ ಭೂಪ!

ಬಿಜೆಪಿ ಟಿಕೆಟ್ ಗಾಗಿ ಮೊಬೈಲ್ ಟವರ್ ಏರಿದ ಭೂಪ!

0

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ರಂಗೇರಿದೆ. ಭರಪೂರ ನಾಮಪತ್ರಗಳು ಸಲ್ಲಿಕೆಯಾಗುತ್ತಿವೆ. ಮತ್ತೊಂದು ಕಡೆ ಟಿಕೆಟ್ ವಂಚಿತರು ಬಂಡಾಯದ ಬಾವುಟ ಹಾರಿಸುತ್ತಿದ್ದರೇ, ಇಲ್ಲೊಬ್ಬ ಭೂಪ ಬಿಜೆಪಿ ಟಿಕೆಟ್ ನನಗೆ ಬೇಕೆಂದು ಬಿಎಸ್ಎನ್ಎಲ್ ಮೊಬೈಲ್ ಟವರ್ ಏರಿ ಹಠ ಹಿಡಿದಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ಅಜ್ಜಂಪುರ ತಾಲೂಕಿನ ಶಿವನಿ ಆರ್.ಎಸ್.ಗ್ರಾಮದಲ್ಲಿ ಘಟನೆ ನಡೆದಿದ್ದು, ಶಿವನಿ ಆರ್.ಎಸ್. ಗ್ರಾಮದ ರಂಗಪ್ಪ ಎಂದು ಗುರುತಿಸಲಾಗಿದೆ. ಅಜ್ಜಂಪುರ ತರೀಕೆರೆ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟಿದ್ದು, ಬಿಜೆಪಿಯಿಂದ ಈಗಾಗಲೇ ಡಿ.ಎಸ್.ಸುರೇಶ್ ಕಣಕ್ಕಿಳಿದಿದ್ದಾರೆ. ಈ ನಡುವೆ ರಂಗಪ್ಪ, ನನಗೆ ಬಿಜೆಪಿ ಟಿಕೆಟ್ ಬೇಕೇ ಬೇಕು ಅಂತ ಪಟ್ಟು ಹಿಡಿದು ಮೊಬೈಲ್ ಟವರ್ ಏರಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ರಂಗಪ್ಪನನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ರಂಗಪ್ಪ ಕಳೆದ 15 ವರ್ಷಗಳಿಂದ ಬಿಜೆಪಿ ಕಾರ್ಯ ಕರ್ತನಾಗಿದ್ದು ಟಿಕೆಟ್ ಗಾಗಿ ಹಠ ಹಿಡಿದು ಟವರ್ ಏರಿದ್ದು ಪೊಲೀಸರು ಮನವೊಲಿಸಿ ಕೆಳಗಿಳಿಸಿದ್ದಾರೆ.

Exit mobile version