Home ತಾಜಾ ಸುದ್ದಿ ಬಿಜೆಪಿ ಕರ್ನಾಟಕವನ್ನು ಲೂಟಿ ಮಾಡಿದೆ

ಬಿಜೆಪಿ ಕರ್ನಾಟಕವನ್ನು ಲೂಟಿ ಮಾಡಿದೆ

0

ಬೀದರ್: ಬಿಜೆಪಿ ಸರ್ಕಾರ ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಭ್ರಷ್ಟಾಚಾರದ ಮೂಲಕ ಕರ್ನಾಟಕವನ್ನು ಲೂಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗಂಭೀರವಾಗಿ ಆರೋಪಿಸಿದರು.
ಇಲ್ಲಿಗೆ ಸಮೀಪ ಇರುವ ಬಗದಲ್ ಗ್ರಾಮದ ಬಳಿ ಬುಧವಾರ ವಿಧಾನಸಭಾ ಚುನಾವಣೆ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿ ಪರ ಬೃಹತ್ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ `ಚೋರಿ’ (ಕಳ್ಳತನ) ಆರಂಭಿಸಿತು. ಬಿಜೆಪಿ ಸರ್ಕಾರ ಶಾಸಕರನ್ನು ಖರೀದಿಸುವ ಮೂಲಕ ಕಳ್ಳತನದಿಂದಲೇ ಅಧಿಕಾರಕ್ಕೆ ಬಂದಿತು ಎಂದು ಕಟುವಾಗಿ ಟೀಕಿಸಿದರು.

Exit mobile version