Home ತಾಜಾ ಸುದ್ದಿ ಬಳ್ಳಾರಿಯಲ್ಲಿ ಮಧ್ಯಪ್ರದೇಶ ಸಿಎಂ ರೋಡ್ ಶೋ

ಬಳ್ಳಾರಿಯಲ್ಲಿ ಮಧ್ಯಪ್ರದೇಶ ಸಿಎಂ ರೋಡ್ ಶೋ

0

ಬಳ್ಳಾರಿ: ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವಾಣ್ ನಗರದಲ್ಲಿ ರೋಡ್ ಶೋ ನಡೆಸಿದರು.
ಖೂನಿ ಠಾಣಾ ಮಸೀದಿಯಿಂದ ರೋಡ್ ಶೋ ಆರಂಭಿಸಿದ ಚವಾಣ್ ಕೌಲ್ ಬಜಾರ್ ಪ್ರದೇಶದಲ್ಲಿ ತೆರೆದ ವಾಹನದಲ್ಲಿ ಸಂಚಾರ ಮಾಡಿ ಮತಯಾಚನೆ ಮಾಡಿದರು.
ಕೌಲ್ ಬಜಾರ್ ಪೊಲೀಸ್ ಠಾಣೆ ಬಳಿ ತೆರೆದ ವಾಹನದಲ್ಲಿ ಸೇರಿದ್ದ ಮತದಾರರ ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಡಬಲ್ ಇಂಜಿನ್ ಸರ್ಕಾರ ಬಂದಂತೆ ಆಗುತ್ತದೆ. ಇದರಿಂದ ರಾಜ್ಯ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಮಾಜಿ ಸಂಸದರಾದ ಜಿ.ಶಾಂತ, ಸಣ್ಣ ಫಕ್ಕೀರಪ್ಪ, ಮುಖಂಡ ಗುಜರಿ ಅಜೀಜ್ ಇದ್ದರು.

Exit mobile version