Home ತಾಜಾ ಸುದ್ದಿ ನೀರಿನ ಬವಣೆ-ಆಯುಕ್ತರ ಗಂಭೀರ ಚರ್ಚೆ

ನೀರಿನ ಬವಣೆ-ಆಯುಕ್ತರ ಗಂಭೀರ ಚರ್ಚೆ

0

ಬೆಳಗಾವಿ: ಗಡಿನಾಡ ಬೆಳಗಾವಿ ಮಹಾನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ನೂತನ ಆಯುಕ್ತ ಅಶೋಕ ದುಡಗುಂಟಿ ಹಲವು ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ.
ಅಧಿಕಾರ ವಹಿಸಿಕೊಂಡ ತಕ್ಷಣ ಕೈಕಟ್ಟಿಕೊಂಡು ಕುಳಿತುಕೊಳ್ಳದ ಅವರು, ಇಂದು ಬೆಳ್ಳಂ ಬೆಳಿಗ್ಗೆಯೇ ನಗರಕ್ಕೆ ನೀರು ಪೂರೈಸುವ ಎಲ್ ಆ್ಯಂಡ್ ಟಿ ಕಂಪನಿಯವರೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿದರು. ಅಷ್ಟೇ ಅಲ್ಲ ಯಾವುದೇ ಸಂದರ್ಭದಲ್ಲಿ ಬೆಳಗಾವಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ನೀರು ಪೋಲಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ಇಲ್ಲಿ ಅವರಿಂದ ನೀರು ಪೂರೈಕೆ ಬಗ್ಗೆ ಮಾಹಿತಿ ಪಡೆದುಕೊಂಡ ನಂತರ ಅವರು ರಾಕಸಕೊಪ್ಪ ಜಲಾಶಯಕ್ಕೆ ಭೆಟ್ಟಿ ನೀಡಿದರು. ಅಲ್ಲಿಂದ ಬಸವನಕೊಳ್ಳಕ್ಕೂ ಭೆಟ್ಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

Exit mobile version