Home ನಮ್ಮ ಜಿಲ್ಲೆ ಉಡುಪಿ ನನಗೂ ಚೈತ್ರಾಗೂ ಯಾವುದೇ ಸಂಬಂಧ ಇಲ್ಲ

ನನಗೂ ಚೈತ್ರಾಗೂ ಯಾವುದೇ ಸಂಬಂಧ ಇಲ್ಲ

0

ಉಡುಪಿ: ಕಾಸು ಕೊಟ್ಟು ಟಿಕೆಟ್ ಪಡೆಯುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ. ನನಗೂ ಚೈತ್ರಾ ಕುಂದಾಪುರಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ಡೀಲ್ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಚೈತ್ರಾ ಕುಂದಾಪುರಳ ಬೆಂಬಲಕ್ಕೆ ನಾವು ಯಾರೂ ಕೂಡ ನಿಂತಿಲ್ಲ. ರಕ್ಷಣೆಯೂ ಮಾಡುತ್ತಿಲ್ಲ. ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಬೇಕು. ಪ್ರಕರಣದ ಕುರಿತು ತನಿಖೆ ಆಗುತ್ತಿದೆ ನಿಷ್ಪಕ್ಷವಾಗಿ ತನಿಖೆಯಾಗಲಿ. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ ತಪ್ಪು ಮಾಡದೆ ಇದ್ದರೆ ಅನಾವಶ್ಯಕವಾಗಿ ತೊಂದರೆ ಕೊಡುವುದು ಬೇಡ ಎಂದರು.

Exit mobile version