ಬೆಂಗಳೂರು: ನಟ ಶಿವರಾಜ್ ಕುಮಾರ್ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಎಂದು ಕೆಎಂಎಫ್ ಅಧ್ಯಕ್ಷ ಭೀಮ ನಾಯಕ್ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು
ನಾಡಿನ ಜನತೆಯ ಪರವಾಗಿ ಅಭಿನಂದನೆ ತಿಳಿಸಿದ್ದಾರೆ, ಅವರು ತಮ್ಮ ಟ್ವೀಟ್‌ನಲ್ಲಿ “ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೋ ಡಾ|| ಶಿವರಾಜಕುಮಾರ ಅವರು “ನಂದಿನಿ” ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಒಪ್ಪಿಕೊಂಡಿರುವ ಕರುನಾಡ ಚಕ್ರವರ್ತಿಗೆ ಅಭಿನಂದನೆ ಸಲ್ಲಿಸಿ ಶುಭ ಕೊರಲಾಯಿತು. ಅವರಿಗೆ ಕೆ.ಎಂ.ಎಫ್ ಮತ್ತು ಸಮಸ್ತ ಕರ್ನಾಟಕ ರೈತರ ಹಾಗೂ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು” ಎಂದಿದ್ದಾರೆ. ಈ ಹಿಂದೆ ದಿವಂಗತ ಪುನೀತ್ ರಾಜಕುಮಾರ್ ಕೆಎಂಎಫ್ ರಾಯಭಾರಿಯಾಗಿದ್ದರು. ಇದೀಗ ಅವರ ಸಹೋದರ, ನಟ ಶಿವರಾಜ್ ಕುಮಾರ್ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನೇಮಕವಾಗಿದ್ದಾರೆ.
