Home ತಾಜಾ ಸುದ್ದಿ ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ

ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ

0

ದೇಶದ್ರೋಹದ ಸಂಘಟನೆ ಜೊತೆಗೆ ಬಜರಂಗದಳ ಹೋಲಿಸ್ತೀರಾ? ಎಂದು ಕಾಂಗ್ರೆಸ್‌ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಜರಂಗದಳ ಬ್ಯಾನ್ ಮಾಡುವ ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆ ಕುರಿತು ಮಾತನಾಡಿರುವ ಅವರು, ರಾಜ್ಯದಲ್ಲಿ ನಡೆದ 30 ಕೊಲೆಗಳಲ್ಲಿ 11 ಕೊಲೆಗಳಲ್ಲಿ ಪಿಎಫ್ಐ ಹೆಸರಿದೆ. ಇಂತಹ ದೇಶದ್ರೋಹದ ಸಂಘಟನೆ ಜೊತೆಗೆ ಬಜರಂಗದಳ ಹೋಲಿಸ್ತೀರಾ? ನಿಮಗೆ ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ ಎಂದು ಸವಾಲು ಹಾಕಿದ್ದಾರೆ.
ರಾಮ ಮಂದಿರ ಹೋರಾಟ ಸಂದರ್ಭದಲ್ಲಿ ಹುಟ್ಟಿದ ಸಂಘಟನೆ ಇದು. ಕಾಂಗ್ರೆಸ್‌ನಲ್ಲಿರೋ ಹಿಂದೂಗಳು ಇದನ್ನ ಸರಿಯಾಗಿ ಅರ್ಥಮಾಡಿಕೊಳ್ಳಿ. ಮೊದಲು ಕಾಂಗ್ರೆಸ್ ಇದನ್ನು ವಾಪಾಸ್ ಪಡೆದು ಕ್ಷಮೆ ಕೇಳಬೇಕು ಎಂದಿದ್ದಾರೆ.

Exit mobile version