Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗದಲ್ಲಿಯೇ ರಾಜಕಾರಣ: ಕೋಲಾರಕ್ಕೆ ಹೋಗಲ್ಲ

ಚಿತ್ರದುರ್ಗದಲ್ಲಿಯೇ ರಾಜಕಾರಣ: ಕೋಲಾರಕ್ಕೆ ಹೋಗಲ್ಲ

0

ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಮುಖ ನೋಡದೆ ಸಂಸತ್‌ಗೆ ಕಳುಹಿಸುವ ಚಿತ್ರದುರ್ಗ ಜಿಲ್ಲೆಯಲ್ಲಿಯೇ ರಾಜಕಾರಣ ಮಾಡುತ್ತೆನೆ ಹೊರತು ಕೋಲಾರಕ್ಕೆ ಹೋಗುವುದಿಲ್ಲ ಎಂದು ಸಚಿವ ಎ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ೨೦೧೮ರ ಚುನಾವಣೆಯಲ್ಲಿ ಮುಖ ನೋಡದೆ ನನ್ನನ್ನು ಸಂಸತ್‌ಗೆ ಕಳುಹಿಸಿದ ಜನರ ಪರವಾಗಿ ಕೆಲಸ ಮಾಡುತ್ತೆನೆ. ಚಿತ್ರೆದುರ್ಗ ಬಿಟ್ಟು ಬೇರೆ ಕಡೆ ರಾಜಕಾರಣ ಮಾಡುವುದಿಲ್ಲ. ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಬೇಕು. ಕೋಲಾರಕ್ಕೆ ಹೋಗಲ್ಲ ಎಂದರು.
ಸ್ಥಳೀಯರಿಗೆ ಟಿಕೆಟ್ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ನನ್ನ ವಿರೋಧ ಇಲ್ಲ. ಮತದಾರರ ಪ್ರಜ್ಞಾವಂತಿಕೆ ಸಲಾಂ. ಸ್ಥಳೀಯರಿಗೆ ಟಿಕೆಟ್ ಕೊಡಬೇಕೆ ಎನ್ನುವ ಕೂಗಿಗೆ ಬೆಂಬಲ ಇದೆ. ಕುತಂತ್ರ ಮಾಡುವ ನಾರಾಯಣಸ್ವಾಮಿ ಅಲ್ಲ.ಚುನವಣೆಗೆ ಜನರ ಸೇವೆ ಮಾಡುವರು ಸ್ಪರ್ಧಿಸಬೇಕು. ಚುನಾವಣೆ ಎಂದರೆ ವ್ಯವಹಾರಕ್ಕೆ ಬಳಕೆ ಮಾಡಿ ಹಣ ಮಾಡುವುದಕ್ಕೆ ಎನ್ನುವ ದಾರಿಯಲ್ಲಿ ಸಾಗುತ್ತಿದೆ. ಮತ ಹಾಕಿದ ಮೇಲೆ ಚುನಾಯಿತ ಪ್ರತಿನಿಧಿಗಳು ರಾಜರಾಗಿ ಮತದಾರರು ಭಿಕ್ಷೆ ಬೇಡಬೇಕೆ? ನಿಮಗೆ ಮತ ಹಾಕಿದ್ದೆವೆ. ನೀವೆ ಕೆಲಸ ಮಾಡಿಕೊಡಬೇಕು ಎನ್ನುವ ಪರಿಸ್ಥಿತಿ ಇದೆ. ರಾಜಕಾರಣಿಗಳು ಎಲ್ಲವನ್ನು ಲಾಭದಾಯಕವಾಗಿ ನೋಡುತ್ತಿದ್ದಾರೆ. ಇದು ಅನುಭವವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.

Exit mobile version