Home ನಮ್ಮ ಜಿಲ್ಲೆ ಕೋಲಾರ ಕೋಲಾರದಿಂದ ಸ್ಪರ್ಧಿಸೋಕೆ ಹೈಕಮಾಂಡ್‌ ಬೇಡ ಅಂದಿಲ್ಲ

ಕೋಲಾರದಿಂದ ಸ್ಪರ್ಧಿಸೋಕೆ ಹೈಕಮಾಂಡ್‌ ಬೇಡ ಅಂದಿಲ್ಲ

0

ಕೋಲಾರದಿಂದ ಸ್ಪರ್ಧಿಸೋಕೆ ಹೈಕಮಾಂಡ್‌ ಬೇಡ ಅಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಮನೆಯ ಮುಂದೆ ಅಭಿಮಾನಿಗಳು ‘ರಕ್ತ ಕೊಟ್ಟೇವು ಹೊರತು ಸಿದ್ದರಾಮಯ್ಯ ಅವರನ್ನು ಬಿಡೆವುʼ ಎಂದು ಪ್ರತಿಭಟಿಸಿರುವ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಬಗ್ಗೆ ಇನ್ನೂ ಯಾವುದೂ ಇತ್ಯರ್ಥ ಆಗಿಲ್ಲ. ಅಲ್ಲದೇ ರಾಹುಲ್‌ ಗಾಂಧಿಯಾಗಲೀ, ಮಲ್ಲಿಕಾರ್ಜುನ ಖರ್ಗೆಯಾಗಲೀ ಕೋಲಾರ ಬೇಡವೆಂದು ಹೇಳಿಲ್ಲ. ಕ್ಷೇತ್ರದ ಆಯ್ಕೆ ನಿಮ್ಮ ತೀರ್ಮಾನವಾಗಿದೆ ಎಂದಿದ್ದಾರೆ. ಆದರೆ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಾದ್ಯಂತ
ಓಡಾಡಬೇಕು. ಹೀಗಾಗಿ ಕೋಲಾರಕ್ಕೆ ಪ್ರಚಾರಕ್ಕಾಗಿ ಹೋಗಬೇಡಿ ಎಂದಿದ್ದಾರೆ ಎಂದು ತಿಳಿಸಿದರು.

Exit mobile version