Home ತಾಜಾ ಸುದ್ದಿ ಕೆರೆಯಲ್ಲಿ ಮುಳುಗಿ ಸಹೋದರರಿಬ್ಬರು ಮೃತ್ಯು

ಕೆರೆಯಲ್ಲಿ ಮುಳುಗಿ ಸಹೋದರರಿಬ್ಬರು ಮೃತ್ಯು

0

ಮಂಜೇಶ್ವರ: ಕೆರೆಯಲ್ಲಿ ಸ್ನಾನಕ್ಕಿಳಿದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂಬಳೆ ಸಮೀಪದ ಮೊಗ್ರಾಲ್ ಕೊಪ್ಪಳ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಮಂಜೇಶ್ವರ ಹೊಸಂಗಡಿ ಸಮೀಪದ ಮಜಿ ಬೈಲ್‌ನ ನಿವಾಸಿ ಬಸ್ ಚಾಲಕ ಖಾದರ್ ಅವರ ಮಕ್ಕಳಾದ ನಾಝಿಮ್ (೨೨) ಮತ್ತು ನಾದಿಲ್ (೧೭) ಎಂದು ಗುರುತಿಸಲಾಗಿದೆ.
ಬಕ್ರೀದ್ ಆಚರಣೆಗಾಗಿ ಅಜ್ಜಿ ಮನೆಗೆ ತೆರಳಿದ್ದು ಇವರಿಬ್ಬರು ಈಜಲೆಂದು ಕೆರೆಗೆ ಇಳಿದ ವೇಳೆ ಅವಘಡ ಸಂಭವಿಸಿದೆ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ಸ್ಥಳೀಯರು ಮೇಲಕ್ಕೆತ್ತಿ ಅಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಾವು ಸಂಭವಿಸಿದೆ. ಈ ಸಂಬಂಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

Exit mobile version