Home ತಾಜಾ ಸುದ್ದಿ ಕುಟುಂಬದವರೊಂದಿಗೆ ಬಂದು ಮತ ಚಲಾಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕುಟುಂಬದವರೊಂದಿಗೆ ಬಂದು ಮತ ಚಲಾಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

0

ಹುಬ್ಬಳ್ಳಿ: ಕೇಶ್ವಾಪುರದ ವಿವೇಕಾನಂದ ಕಾಲೊನಿಯ ರೋಟರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮತಗಟ್ಟೆ ನಂ. 109 ರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಂಬದವರೊಂದಿಗೆ ಬಂದು ಮತ ಚಲಾಯಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಬೆಳಿಗ್ಗೆಯಿಂದ ಮತಗಟ್ಟೆಗಳ ಎದುರು ಜನರು ಸರತಿಸಾಲಿನಲ್ಲಿ ನಿಂತು, ಮತ ಚಲಾಯಿಸುತ್ತಿದ್ದಾರೆ. ರಾಜ್ಯದಾದ್ಯಂತ ಪ್ರಜಾತಂತ್ರ ಹಬ್ಬಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.

ಸುಶಿಕ್ಷಿತರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿತ್ತು. ಆದರೆ, ಈ ವಿವೇಕಾನಂದ ಕಾಲೊನಿಯಲ್ಲಿ ಬಹುತೇಕ ಸುಶಿಕ್ಷಿತರೇ ಇದ್ದು, ಬೆಳಿಗ್ಗೆಯಿಂದಲೇ ಮತಚಲಾಯಿಸುವ ಉತ್ಸಾಹ ತೋರುತ್ತಿದ್ದಾರೆ. ಇದು ಬಿಜೆಪಿಗೆ ಬಹುಮತ ದೊರೆಯುವ ಮುನ್ಸೂಚನೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ 113ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ಮತ್ತೊಮ್ಮೆ ಡಬ್ಬಲ್ ಎಂಜಿನ್ ಸರ್ಕಾರ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version