Home ನಮ್ಮ ಜಿಲ್ಲೆ ಗದಗ ಕರ್ನಾಟಕವೇ ಒಂದು ಅನುಭವ ಮಂಟಪ

ಕರ್ನಾಟಕವೇ ಒಂದು ಅನುಭವ ಮಂಟಪ

0

ಗದಗ: ಇಂದು ಹಮ್ಮಿಕೊಂಡಿದ್ದ ‘ಕರ್ನಾಟಕ ಸಂಭ್ರಮ- ೫೦’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಕರ್ನಾಟಕಕ್ಕೆ ಮರುನಾಮಕರಣವಾದ ಕ್ಷಣಗಳಿಗೂ ಹಾಗೂ ಆ ಸಂದರ್ಭಕ್ಕೆ 50 ವರ್ಷ ತುಂಬಿದ ಕ್ಷಣಗಳಿಗೂ ಗದಗ ಜಿಲ್ಲೆ ಸಾಕ್ಷಿಯಾಗಿದೆ. ಕರ್ನಾಟಕ ಎನ್ನುವುದು ಶಾಂತಿಯ ಮಂತ್ರ, ಕರ್ನಾಟಕ ಎಂದರೆ ಮಾದರಿ ಆಡಳಿತದ ಯಂತ್ರ. ಇಡೀ ಕರ್ನಾಟಕವೇ ಒಂದು ಅನುಭವ ಮಂಟಪವಾಗಿದ್ದು, ನಾಡಿನ ಕಾರ್ಯಭಾರವನ್ನು ನಿಮ್ಮ ಆಶೀರ್ವಾದದಿಂದ ಮಾಡುತ್ತಿದ್ದೇವೆ.
ಇತಿಹಾಸವನ್ನು ಮರೆತವರು, ಇತಿಹಾಸವನ್ನು ಸೃಷ್ಟಿಸಲಾರರು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದು, ಅದರಂತೆ ಕರ್ನಾಟಕದ ಭವ್ಯ ಪರಂಪರೆಯನ್ನು ಜನತೆಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಸಂಭ್ರಮದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು

Exit mobile version