Home ನಮ್ಮ ಜಿಲ್ಲೆ ಚಿಕ್ಕಮಗಳೂರು ಈಶ್ವರಪ್ಪ ಮಂತ್ರಿ ಆದರೆ ನನಗೆ ಸಂತೋಷ: ಸಿ.ಟಿ. ರವಿ

ಈಶ್ವರಪ್ಪ ಮಂತ್ರಿ ಆದರೆ ನನಗೆ ಸಂತೋಷ: ಸಿ.ಟಿ. ರವಿ

0

ಚಿಕ್ಕಮಗಳೂರು: ಪಕ್ಷ ಕಟ್ಟಿದ ಹಿರಿಯ ನಾಯಕರಲ್ಲಿ ಈಶ್ವರಪ್ಪ ಒಬ್ಬರು. ಅಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ತನಿಖೆಯಲ್ಲಿ ಅವರ ಪಾತ್ರ ಇಲ್ಲವೆಂದು ಸಾಬೀತಾಗಿದೆ. ಈಗ ಅವರು ಮಂತ್ರಿ ಸ್ಥಾನ ಕೇಳೋದು ತಪ್ಪಲ್ಲ, ಅವರಿಗೆ ಕೊಡಬೇಕಿತ್ತು ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಅವರ ಗೌರವಕ್ಕೆ ಯಾವುದೇ ಕುಂದು ಉಂಟಾಗಲ್ಲ. ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಪಕ್ಷದ ಗೆಲುವಿನ ಬಗ್ಗೆ ಸಲಹೆ ಅವರು ನೀಡಿದ್ದಾರೆ. ಅವರು ಯಾವತ್ತೂ ನಮ್ಮ ಹಿರಿಯ ನಾಯಕರಲ್ಲಿ ಒಬ್ಬರು. ಅವರ ಗೌರವಕ್ಕೆ ಕುಂದು ಬರಲು ಅವಕಾಶ ನೀಡಲ್ಲ. ಅವರು ಮಂತ್ರಿ ಆಗಿದ್ದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿಯಲ್ಲಿ ನಾನೂ ಒಬ್ಬ ಎಂದು ಸಿ.ಟಿ. ರವಿ ಹೇಳಿದರು.

Exit mobile version