ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ ಅರಸೀಕೆರೆ ಮತ್ತು ಕೇರಳದ ಕಣ್ಣೂರು ನಡುವೆ ಬೇಡಿಕೆಯ ಮೇರೆಗೆ ವಿಶೇಷ ರೈಲುಗಳನ್ನು (06205/06206) ಓಡಿಸಲಾಗುತ್ತದೆ. ಅವುಗಳು ಈ ಕೆಳಗಿನಂತಿವೆ.
ಅರಸೀಕೆರೆ-ಕಣ್ಣೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ (06205) ರೈಲು ಏಪ್ರಿಲ್ 28 ರಂದು ಮಧ್ಯಾಹ್ನ 12:15 ಗಂಟೆಗೆ ಅರಸೀಕೆರೆಯಿಂದ ಹೊರಟು ಮರುದಿನ ಬೆಳಿಗ್ಗೆ 5:15 ಗಂಟೆಗೆ ಕಣ್ಣೂರಿಗೆ ತಲುಪಲಿದೆ.
ಈ ವಿಶೇಷ ರೈಲು ತುಮಕೂರು-(12:58/01:00PM), ಚಿಕ್ಕಬಾಣಾವರ-(01:38/01:40PM), ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-(03:35/03:45PM), ಕೃಷ್ಣರಾಜಪುರಂ-(04:03/04:05PM), ಬಂಗಾರಪೇಟೆ-(04:47/04:48PM), ಸೇಲಂ-(07:47/07:50PM), ಈರೋಡ್-(08:40/08:50PM), ತಿರುಪ್ಪೂರ-(09:33/09:35PM), ಕೊಯಮತ್ತೂರು (10:37/10:40PM), ಪಾಲಕ್ಕಾಡ-(11:42/11:45PM), ಶೋರನೂರ-(12:20/12:30AM), ತಿರೂರ–(01:15/01:17AM), ಕೋಜ್ಹಿಕೊಡ-(02:05/02:10AM, ವಡಕರ-(03:00/03:02AM) ಮತ್ತು ತಲಶೇರಿ-(03:45/03:47AM) ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06206 ಕಣ್ಣೂರು ನಿಲ್ದಾಣದಿಂದ ಏಪ್ರಿಲ್ 29 ರಂದು ಬೆಳಿಗ್ಗೆ 8 ಗಂಟೆಗೆ ಹೊರಟು ಮರುದಿನ ಬೆಳಗಿನ ಜಾವ 3 ಗಂಟೆಗೆ ಅರಸೀಕೆರೆ ನಿಲ್ದಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲು ತಲಶೇರಿ-(08:25/08:27AM), ವಡಕರ-(08:50/08:52AM), ಕೋಜ್ಹಿಕೊಡ-(09:50/09:55AM, ತಿರೂರ-(10:35/10:37AM), ಶೋರನೂರ-(11:30/11:40AM), ಪಾಲಕ್ಕಾಡ-(12:15/12:20PM), ಕೊಯಮತ್ತೂರು-(01:50/01:55PM), ತಿರುಪ್ಪೂರ-(02:40/02:42PM), ಈರೋಡ್-(03:35/03:45PM), ಸೇಲಂ-(04:45/04:48PM), ಬಂಗಾರಪೇಟೆ-(07:53/07:55PM), ಕೃಷ್ಣರಾಜಪುರಂ-(08:53/08:55PM), ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–(09:05/09:15PM), ಚಿಕ್ಕಬಾಣಾವರ–(10:20/10:22PM) ಮತ್ತು ತುಮಕೂರು–(11:00/11:02PM) ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.
ಈ ವಿಶೇಷ ರೈಲು (1) ಎಸಿ ಟು ಟೈಯರ್, (1) ಎಸಿ ತ್ರಿ ಟೈಯರ್, (6) ಸ್ಲೀಪರ್ ಕ್ಲಾಸ್ ಬೋಗಿಗಳು, (4) ಸಾಮಾನ್ಯ ದರ್ಜೆಯ ಬೋಗಿಗಳು ಮತ್ತು (2) ದಿವ್ಯಾಂಗ ಸ್ನೇಹಿ ಬೋಗಿಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಸೇರಿದಂತೆ 14 ಬೋಗಿಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.