Home ತಾಜಾ ಸುದ್ದಿ ರೈಲಿಗೆ ಕಲ್ಲು ಎಸೆದಿರುವುದು ವಿಕೃತ ಮನೋಭಾವ

ರೈಲಿಗೆ ಕಲ್ಲು ಎಸೆದಿರುವುದು ವಿಕೃತ ಮನೋಭಾವ

0

ಹುಬ್ಬಳ್ಳಿ: ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಕಲ್ಲೆಸೆದಿದ್ದು ವಿಕೃತ ಮನೋಭಾವ ಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ದೇಶದ ಅನೇಕ ಭಾಗದಲ್ಲಿ ಈ ರೀತಿ ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವಂದೇ ಭಾರತ ರೈಲು ದೇಶದ ಆಸ್ತಿ. ದೇಶದ ಜನರಿಗೆ ಆಧುನಿಕ ಸೌಲಭ್ಯ ಒದಗಬೇಕೆಂಬ ಉದ್ದೇಶದಿಂದ ರೈಲು ಕಲ್ಪಿಸಲಾಗಿದೆ. ಈ ರೈಲುಗಳು ಭಾರತದಲ್ಲಿ ತಯಾರಾಗಬೇಕೆಂಬುದು ಪ್ರಧಾನಿ ಮೋದಿ ಅವರ ಕಾಳಜಿಯಾಗಿದ್ದು, ಕೆಲ ಕಿಡಿಗೇಡಿಗಳು ರಸ್ತೆ ಪಕ್ಕಕ್ಕೆ ನಿಂತು ರೈಲಿಗೆ ಕಲ್ಲು ಎಸೆಯುತ್ತಿದ್ದಾರೆ. ರೈಲಿನ ಒಳಗೆ ಇದ್ದವರಿಗೆ ಕಲ್ಲೆಸೆದವರು ಯಾರು ಎಂಬುದು ಗೊತ್ತಾಗುವುದಿಲ್ಲ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

Exit mobile version