ಬಾಗಲಕೋಟೆ: ಒಂದಲ್ಲ, ಎರಡಲ್ಲ ಬರೋಬ್ಬರಿ 17 ಗ್ರಾಮ ಪಂಚಾಯಿತಿಯ ನೂರಾರು ಸದಸ್ಯರು ರೆಸಾರ್ಟ್‌ನತ್ತ ಮುಖ ಮಾಡಿದ್ದರೆ, ಇನ್ನೂ ಕೆಲವರು ಅಜ್ಞಾತವಾಸದತ್ತ ತೆರಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ 12 ಹಾಗೂ ತೇರದಾಳ ತಾಲೂಕಿನ 5 ಗ್ರಾಮ ಪಂಚಾಯಿತಿಗಳಿಗೆ ಎರಡನೇಯ ಅವಧಿಗೆ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನಲೆಯಲ್ಲಿ ಆಯಾ ಗ್ರಾಮ ಪಂಚಾಯಿತಿಯ ಬಹುತೇಕ ಸದಸ್ಯರು ರೆಸಾರ್ಟ್‌ನತ್ತ ಹೋಗಿದ್ದರೆ ಇನ್ನೂ ಕೆಲ ಸದಸ್ಯರು ಅಜ್ಞಾತವಾಸದಲ್ಲಿದ್ದಾರೆ.
ಒಟ್ಟಾರೆ ಶಾಸಕರು ಹಾಗೂ ಈಚೆಗೆ ನಗರಸಭೆ, ಪುರಸಭೆ ಸದಸ್ಯರ ಪರಂಪರೆಯನ್ನು ಗ್ರಾಮ ಪಂಚಾಯಿತಿ ಸದಸ್ಯರೂ ಮುನ್ನಡೆಸುತ್ತಿರುವುದು ವಿಶೇಷ ಹಾಗೂ ಆಶ್ಚರ್ಯ ತಂದಿದೆ.