Home ತಾಜಾ ಸುದ್ದಿ ಅಕ್ಕಿ ಕೊಡದೇ ಬಿಜೆಪಿ ರಾಜಕೀಯ

ಅಕ್ಕಿ ಕೊಡದೇ ಬಿಜೆಪಿ ರಾಜಕೀಯ

0

ಹುಬ್ಬಳ್ಳಿ : ಜನರ ವಿಶ್ವಾಸ ಕಳೆದುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕೊಡುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು, ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಯಲ್ಲಿ 10 ಕೆ.ಜಿ ಅಕ್ಕಿ ಕೊಡುವುದೂ ಒಂದು. ನಮ್ಮ ಯೋಜನೆ ಜಾರಿಗೆ ತರಬೇಕಾದ ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಮೊದಲು ಅಕ್ಕಿ ಪೂರೈಸುವುದಾಗಿ ಪತ್ರ ಬರೆದು ನಂತರ ಅಕ್ಕಿ ಕೊಡುವುದಿಲ್ಲ ಎಂದು ಹೇಳಿದೆ. ಯೋಜನೆ ಜಾರಿ ವಿಳಂಬಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ಏಳು ಬಾರಿ ಸಂಸದರಾದವರು, ಕೇಂದ್ರ ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಆಹಾರ ಸಚಿವರಾಗಿ ದೆಹಲಿಗೆ ಕೇಂದ್ರ ಆಹಾರ ಸಚಿವರ ಭೇಟಿಗೆ ಮೂರು ದಿನ ಕಾದಿದ್ದಾರೆ. ಬಳಿಕ ಭೇಟಿ ಮಾಡಿದರೂ ಕೇಂದ್ರ ಸಚಿವರು ಅಕ್ಕಿ ಪೂರೈಸಲು ನಿರಾಕರಿಸಿದ್ದಾರೆ. ಇದು ಉದ್ದೇಶಪೂರ್ವಕವಾದ ನಿರ್ಧಾರ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಲಗೈಯಂತಿರುವ ರಾಜ್ಯದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಾರೆ. 20ಕ್ಕೂ ಹೆಚ್ಚು ಸಂಸದರಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಯಾಕೆ ರಾಜ್ಯಕ್ಕೆ ಅಕ್ಕಿ ದೊರಕಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕೊಟ್ಟೆ ಕೊಡುತ್ತೇವೆ: ಕೇಂದ್ರ ಅಕ್ಕಿ ಕೊಡಲಿ. ಬಿಡಲಿ. ನಾವು ಅಕ್ಕಿ ಕೊಟ್ಟೇ ಕೊಡುತ್ತೇವೆ. ಸರ್ಕಾರ ಅಧಿಕಾರಕ್ಕೆ ಬಂದು 20 ದಿನ ಆಗಿದೆ.ವಾಗ್ಯಸರಂಟಿ ಯೋಜನೆ ಜಾರಿಗೆ ಸ್ವಲ್ಪ ಸಮಯ. ಜನರು ತಾಳ್ಮೆಯಿಂದ ಇದ್ದಾರೆ. ಬಿಜೆಪಿಯವರಿಗೆ ತಾಳ್ಮೆ ಇಲ್ಲ ಎಂದು ಹೇಳಿದರು.
ಕೇಂದ್ರದಲ್ಲಿ 9 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಘೋಷಿತ ಯಾವ ಭರವಸೆ ನೀಡಿಲ್ಲ. ರೈತರ ಆದಾಯ ದ್ವಿಗುಣ, ಉದ್ಯೋಗ ಸೃಷ್ಟಿ, ಪ್ರತಿಯೋಬ್ಬರ ಖಾತೆಗೆ 15 ಲಕ್ಷ ಜಮಾ ಮಾಡುವುದು ಸೇರಿದಂತೆ ಏನಿಲ್ಲ. ಸುಳ್ಳು ಭರವಸೆಯಲ್ಲಿಯೇ ಕಾಲ ಕಳೆದಿದೆ ಎಂದು ಆರೋಪಿಸಿದರು.
ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಾವು ಏನು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆಯೋ ಅದನ್ನು ಜಾರಿ ಮಾಡುತ್ತೇವೆ. ನಾವು ಬಿಜೆಪಿಯವರಂತಲ್ಲ ಹೇಳಿದರು.
ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ
ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.

Exit mobile version