Home News ಸ್ಕಿನ್ ಕೇರ್ ಬ್ರಾಂಡ್ ಅಂಬಾಸಿಡರ್ ಆಗಿ ಸ್ಮೃತಿ ಮಂದನಾ

ಸ್ಕಿನ್ ಕೇರ್ ಬ್ರಾಂಡ್ ಅಂಬಾಸಿಡರ್ ಆಗಿ ಸ್ಮೃತಿ ಮಂದನಾ

ನವದೆಹಲಿ : ಪ್ರಮುಖ ಹೆಲ್ತ್ ಆಂಡ್ ವೆಲ್ನೆಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್‌ಗಳನ್ನಾಗಿ ಭಾರತದ ಇಬ್ಬರು ಪ್ರಮುಖ ಕ್ರೀಡಾ ತಾರೆಗಳಾದ ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದನಾ ಮತ್ತು ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಮಾನಿಕಾ ಬಾತ್ರಾ ಅವರನ್ನು ನೇಮಕ ಮಾಡಿದೆ.
ಈ ಕುರಿತು ಮಾತನಾಡಿರುವ ಹರ್ಬಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು , “ವೃತಿಲೈಫ್ ಉತ್ಪನ್ನವು ಆಯುರ್ವೇದದ ತತ್ವಗಳಲ್ಲಿ ಬೇರೂರಿರುವ, ವಿಜ್ಞಾನದಿಂದ ಬೆಂಬಲಿತವಾದ ಸ್ಕಿನ್ ಕೇರ್‌ ಉತ್ಪನ್ನವನ್ನು ಒದಗಿಸುವ ನಮ್ಮ ನಿರಂತರ ಬದ್ಧತೆಯ ಪ್ರತಿರೂಪವಾಗಿದೆ. ಈ ಶ್ರೇಣಿಯನ್ನು ನಾವು ಅನಾವರಣ ಗೊಳಿಸುತ್ತಿರುವ ವೇಳೆಯಲ್ಲಿ ಈಗಾಗಲೇ ಹರ್ಬಲೈಫ್‌ ನ ಮೌಲ್ಯಯುತ ರಾಯಭಾರಿಗಳಾಗಿರುವ ಸ್ಮೃತಿ ಮಂದನಾ ಮತ್ತು ಮಣಿಕಾ ಬಾತ್ರಾ ಅವರನ್ನು ಈ ವೃತಿಲೈಫ್ ಸ್ಕಿನ್ ಕೇರ್ ಸರಣಿಗೂ ರಾಯಭಾರಿಯರನ್ನಾಗಿ ಮಾಡಿದ್ದು, ಈ ಕುರಿತು ಸಂತೋಷ ಹೊಂದಿದ್ದೇವೆ. ಅವರು ವೃತಿಲೈಫ್‌ನ ಅವಿಭಾಜ್ಯವಾದ ಮೌಲ್ಯಗಳಾದ ಸಮತೋಲನ, ಶಕ್ತಿ, ಮತ್ತು ಸತ್ಯಾಸತ್ಯತೆಯನ್ನು ಪ್ರತಿಬಿಂಬಿಸುತ್ತಾರೆ. ಅವರ ಸ್ಫೂರ್ತಿದಾಯಕ ಪಯಣವು ಹೆಚ್ಚಿನ ಜನರಿಗೆ ಸ್ಕಿನ್ ಕೇರ್‌ ಉತ್ಪನ್ನವನ್ನು ಒಂದು ಸಶಕ್ತಗೊಳಿಸುವ ಅಂಶವಾಗಿ ಸ್ವೀಕರಿಸಲು ಪ್ರೇರೇಪಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.

ಈ ಕುರಿತು ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದನಾ ಮಾತನಾಡಿ “ವೃತಿಲೈಫ್ ಕುಟುಂಬದ ಬ್ರಾಂಡ್ ಅಂಬಾಸಿಡರ್ ಆಗಿ ಸೇರಿರುವುದಕ್ಕೆ ನಾನು ಸಂತೋಷ ಹೊಂದಿದ್ದೇನೆ. ಕ್ರೀಡಾಪಟುವಾಗಿ, ನಿರಂತರವಾಗಿ ಸಕ್ರಿಯಳಾಗಿರುವ ವವಗೆ ನನ್ನ ಚರ್ಮದ ಆರೈಕೆ ಮಾಡುವುದು ಅತ್ಯಗತ್ಯವಾಗಿದೆ. ವೃತಿಲೈಫ್‌ ನ ಆಯುರ್ವೇದಿಕ್ ಆಧಾರಿತ ಫಾರ್ಮುಲೇಶನ್‌ ಗಳು ನನ್ನ ಜೀವನಶೈಲಿಗೆ ನಿಜವಾಗಿಯೂ ಹೊಂದಿಕೊಳ್ಳುತ್ತವೆ. ಕ್ಷೇಮ ಪಾಲನೆಗೆ ಪ್ರೇರಣೆ ಒದಗಿಸುವ ವಿಚಾರದಲ್ಲಿ ನಾನು ನಂಬಿಕೆ ಇಡುತ್ತೇನೆ ಮತ್ತು ವೃತಿಲೈಫ್ ಆ ತತ್ವವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ” ಎಂದರು.

ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಮಾತನಾಡಿ ಕ್ರೀಡೆಯಲ್ಲಿ ಮತ್ತು ಜೀವನದಲ್ಲಿ, ಶಿಸ್ತು ಮತ್ತು ಸ್ವ-ಆರೈಕೆ ಒಂದಕ್ಕೊಂದು ಪರಸ್ಪರ ಹೆಣೆದುಕೊಂಡಿವೆ. ವೃತಿಲೈಫ್‌ ಮೂಲಕ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಮತ್ತು ಆಧುನಿಕವಾಗಿ ರಿಫ್ರೆಶಿಂಗ್ ಆಗಿರುವ ಸ್ಕಿನ್ ಕೇರ್‌ ಉತ್ಪನ್ನವನ್ನು ನಾನು ಕಂಡುಕೊಂಡಿದ್ದೇನೆ. ಈ ಬ್ರಾಂಡ್‌ ಅನ್ನು ಪ್ರತಿನಿಧಿಸಲು ಮತ್ತು ಈ ರಾಷ್ಟ್ರದ ವೈವಿಧ್ಯಮಯ ಸೌಂದರ್ಯ ಸಂಪ್ರದಾಯಗಳನ್ನು ಸಂಭ್ರಮಿಸಲು ನಾನು ಸಂತೋಷಪಡುತ್ತೇನೆ” ಎಂದರು.

Exit mobile version