Home ಸಿನಿ ಮಿಲ್ಸ್ ಈ ವಾರದ ಒಟಿಟಿ ಅಪ್‌ಡೇಟ್: ಕೂಲಿ, ಸು ಫ್ರಂ ಸೋ ಇತರ ಸಿನಿಮಾ ಪಟ್ಟಿ

ಈ ವಾರದ ಒಟಿಟಿ ಅಪ್‌ಡೇಟ್: ಕೂಲಿ, ಸು ಫ್ರಂ ಸೋ ಇತರ ಸಿನಿಮಾ ಪಟ್ಟಿ

0

ಈ ವಾರ ಒಟಿಟಿಯಲ್ಲಿ ಸಿನಿಮಾ ನೋಡಲು ಪ್ಲಾನ್ ಮಾಡುತ್ತಿರುವ ಜನರಿಗೆ ಅಪ್‌ಡೇಟ್. ಕೂಲಿ, ಕನ್ನಡದ ಸು ಫಂ ಸೋ ಸೇರಿದಂತೆ ಹಲವು ಚಲನಚಿತ್ರಗಳು ವಿವಿಧ OTTಗಳಲ್ಲಿ ಜನರಿಗೆ ಲಭ್ಯವಿದೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳ ಸಿನಿಮಾ, ವೆಬ್‌ಸೀರಿಸ್ ಜನರ ಮನೆ ಬಾಗಿಲಿಗೆ ಬರಲಿವೆ.

ಈ ವಾರ ಒಟಿಟಿಗೆ ಬರುವ ಸಿನಿಮಾಗಳು, ಅವುಗಳು ಸಿಗುವ ವೇದಿಕೆಯ ಮಾಹಿತಿ ಇಲ್ಲಿದೆ.

  • ಸು ಫ್ರಂ ಸೋ: ಜಿಯೋ ಹಾಟ್‌ ಸ್ಟಾರ್‌ನಲ್ಲಿ ಈ ವಾರ ಕನ್ನಡದ ಪ್ರಸಿದ್ಧ ಸಿನಿಮಾ ಲಭ್ಯವಿದೆ. 2025ರಲ್ಲಿ ಕನ್ನಡದಲ್ಲಿ ಅತಿ ದೊಡ್ಡ ಯಶಸ್ಸು ಕಂಡ ಸಿನಿಮಾ ‘ಸು ಫ್ರಂ ಸೋ’. ಚಿತ್ರವು ಸೆ.9ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯ. ಈ ಹೃದಯಸ್ಪರ್ಶಿ ಹಾಸ್ಯ ಚಿತ್ರವು ದಕ್ಷಿಣ ಕನ್ನಡದ ಹಳ್ಳಿಗಾಡಿನ ಜೀವನ ಶೈಲಿಯನ್ನು ಸುಂದರವಾಗಿ ಸೆರೆ ಹಿಡಿದಿದೆ. ಸ್ಥಳೀಯ ಸಂಸ್ಕೃತಿ ಮತ್ತು ಹಾಸ್ಯದ ವಿಶಿಷ್ಟ ಮಿಶ್ರಣದಿಂದ ಪ್ರೇಕ್ಷಕರ ಮನ ಗೆದ್ದ ಈ ಚಿತ್ರವನ್ನು ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ವೀಕ್ಷಿಸಬಹುದು.
  • ಕೂಲಿ (Coolie): ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕೂಲಿ ಬಹುಬೇಗನೇ ಒಟಿಟಿಗೆ ಬಂದಿದೆ. ಪ್ರೈಮ್ ವಿಡಿಯೋದಲ್ಲಿ ಚಿತ್ರ ಸೆಪ್ಟೆಂಬರ್ 11ರಿಂದ ಲಭ್ಯ. ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರವು ತಮಿಳು ಮತ್ತು ಇತರ ಭಾಷೆಗಳಲ್ಲಿ ಲಭ್ಯವಿರುತ್ತದೆ.
  • ಕಿಸ್ ಆರ್ ಡೈ (Kiss or Die): ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ಕಾಮಿಡಿ ಟ್ವಿಸ್ಟ್‌ನೊಂದಿಗೆ ಇಂಪ್ರೂವ್ ಕಾಮಿಡಿ ಸರಣಿ ‘ಕಿಸ್ ಆರ್ ಡೈ’ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಿದೆ. ಈ ವಾರ ಫ್ರೀ ಇದ್ದಲ್ಲಿ ವೆಬ್ ಸರಣಿ ಆಸಕ್ತರಾಗಿದ್ದಲ್ಲಿ ನೋಡಿ.
  • Jordan Jensen: I Took You With Me. ನೆಟ್‌ಫ್ಲಿಕ್ಸ್‌ನಲ್ಲಿ ಮತ್ತೊಂದು ಕಾಮಿಡಿ ವಿಶೇಷವೂ ಸೇರಿಕೊಂಡಿದೆ. ಹಾಸ್ಯನಟ ಜೋರ್ಡಾನ್ ಜೆನ್ಸನ್ ಚೊಚ್ಚಲ ವಿಶೇಷ ಕಾರ್ಯಕ್ರಮವು ಸ್ತ್ರೀತ್ವದ ಸವಾಲುಗಳು, ಸ್ವ-ಪ್ರೀತಿಯ ಸಂಕೀರ್ಣತೆಗಳು ಮತ್ತು ಅವುಗಳನ್ನು ಕಂಡುಕೊಳ್ಳುವ ಪ್ರಯಾಣದ ಕುರಿತಾಗಿದೆ. ಸೆಪ್ಟೆಂಬರ್ 9 ರಿಂದ ವೀಕ್ಷಿಸಿ
  • ದಿ ಡೆಡ್ ಗರ್ಲ್ಸ್ (The Dead Girls). ನೆಟ್‌ಫ್ಲಿಕ್ಸ್‌ನಲ್ಲಿ ರೋಮಾಂಚಕ ಹುಡುಕಾಡುವವರಿಗೆ ಜಾರ್ಜ್ ಇಬರ್ಗುಯೆಂಗೋಯಿಟಿಯಾ ಕಾದಂಬರಿ ಆಧಾರಿತ ಈ ಸರಣಿಯು 1960ರ ದಶಕದ ಮೆಕ್ಸಿಕೋದಲ್ಲಿ ಬಲಾಡ್ರೋ ಸಹೋದರಿಯರು ಹೇಗೆ ವೇಶ್ಯಾಗೃಹ ಸಾಮ್ರಾಜ್ಯವನ್ನು ನಿರ್ಮಿಸಿದರು ಮತ್ತು ನಿರ್ದಯ ಕೊಲೆಗಾರರಾದರು ಎಂಬುದನ್ನು ವಿವರಿಸುವ ಚಿತ್ರ ಲಭ್ಯ, ಸೆಪ್ಟೆಂಬರ್ 10 ರಿಂದ.
  • ಲವ್ ಈಸ್ ಬ್ಲೈಂಡ್: ಬ್ರೆಜಿಲ್: ಸೀಸನ್ 5 (Love is Blind: Brazil: Season 5) ‘ಲವ್ ಈಸ್ ಬ್ಲೈಂಡ್’ ರಿಯಾಲಿಟಿ ಶೋನ ಬ್ರೆಜಿಲ್ ಆವೃತ್ತಿಯ ಹೊಸ ಸೀಸನ್ 50 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸುವವರೊಂದಿಗೆ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 10ರಿಂದ ನೆಟ್‌ಫಿಕ್ಸ್‌ನಲ್ಲಿ ವೀಕ್ಷಿಸಿ.
  • Love is Blind: France. ನೆಟ್‌ಫ್ಲಿಕ್ಸ್‌ನಲ್ಲಿ ಫ್ರೆಂಚ್ ಪ್ರೇಮಕಥೆ ಹುಡುಕುವವರು ಇದನ್ನು ವೀಕ್ಷಿಸಿ ಪ್ರಸಾರ ದಿನಾಂಕ ಸೆಪ್ಟೆಂಬರ್ 10.

NO COMMENTS

LEAVE A REPLY

Please enter your comment!
Please enter your name here

Exit mobile version