Home ಸಿನಿ ಮಿಲ್ಸ್ ಕ್ರಿಕೆಟ್‌ ನಂತರ ಧೋನಿ ನಟನೆಯತ್ತ? ‘ದಿ ಚೇಸ್’ ಟೀಸರ್ ವೈರಲ್

ಕ್ರಿಕೆಟ್‌ ನಂತರ ಧೋನಿ ನಟನೆಯತ್ತ? ‘ದಿ ಚೇಸ್’ ಟೀಸರ್ ವೈರಲ್

0

ಕ್ರಿಕೆಟ್ ಮೈದಾನದಲ್ಲಿ ತನ್ನ ಅದ್ಭುತ ನಾಯಕತ್ವ ಮತ್ತು ಶಾಂತ ಸ್ವಭಾವದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಇದೀಗ ನಟನೆಯತ್ತ ಮುಖಮಾಡುತ್ತಿರುವ ಸಾಧ್ಯತೆಯ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾನುವಾರ, ಜಿಗ್ರಾ ಚಿತ್ರದ ನಿರ್ದೇಶಕ ವಾಸನ್ ಬಾಲಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ “ದಿ ಚೇಸ್” ಎಂಬ ಟೀಸರ್ ಹಂಚಿಕೊಂಡರು. ಆ ಟೀಸರ್‌ನಲ್ಲಿ ಬಾಲಿವುಡ್ ನಟ ಆರ್. ಮಾಧವನ್ ಹಾಗೂ ಧೋನಿ ಕಾಣಿಸಿಕೊಂಡಿದ್ದು, ಇಬ್ಬರೂ ಶತ್ರುಗಳನ್ನು ಎದುರಿಸುವ ಆಕ್ಷನ್ ಪಾತ್ರಗಳಲ್ಲಿ ಹೊಡೆದಾಟ ನಡೆಸುತ್ತಿರುವ ದೃಶ್ಯಗಳು ಸೇರಿವೆ.

ಇದರಿಂದ, “ಧೋನಿ ಈಗ ಚಿತ್ರ ರಂಗದಲ್ಲಿ ನಟನೆಗೆ ಇಳಿಯುತ್ತಾರಾ?” ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆದರೆ ಈ ಟೀಸರ್ ನಿಜಕ್ಕೂ ಚಲನಚಿತ್ರಕ್ಕೇ ಸೇರಿದೆಯೋ ಅಥವಾ ಯಾವದಾದರೂ ಬ್ರಾಂಡ್ ಜಾಹೀರಾತಿನ ಭಾಗವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಬಾರದಿರುವುದರಿಂದ ಗೊಂದಲ ಮುಂದುವರಿದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವ ಧೋನಿ, ಐಪಿಎಲ್ ಮೂಲಕ ಇನ್ನೂ ಮೈದಾನದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಸಿನೆಮಾ ಲೋಕಕ್ಕೆ ಕಾಲಿಟ್ಟರೆ, ಅದು ಅಭಿಮಾನಿಗಳಿಗೆ ದೊಡ್ಡ ಅಚ್ಚರಿಯಾಗಲಿದೆ. ಪ್ರಸ್ತುತ, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಧೋನಿಯ ಈ ಹೊಸ ಅವತಾರದ ಬಗ್ಗೆ ಅಧಿಕೃತ ಘೋಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version