Home ಸಿನಿ ಮಿಲ್ಸ್ ಆಯುಧ ಪೂಜೆಗೆ ಬಂದ ಪಚ್ಚ ಮ್ಯಾಂಗೋ…

ಆಯುಧ ಪೂಜೆಗೆ ಬಂದ ಪಚ್ಚ ಮ್ಯಾಂಗೋ…

0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿರುವ ಕಿಚ್ಚಾ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅಭಿನಯದ ಮ್ಯಾಂಗೋ ಪಚ್ಚ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

‘ಜೂನಿಯರ್ ಕಿಚ್ಚಾ’ ಎಂಬ ಖ್ಯಾತಿ ಪಡೆದಿರುವ ಸಂಚಿತ್ ಸಂಜೀವ್, ಈ ಮೂಲಕ ಪ್ರಮುಖ ನಾಯಕನಾಗಿ ಬೃಹತ್ ಮಟ್ಟದ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಮ್ಯಾಂಗೋ ಪಚ್ಚ ಚಿತ್ರದ ಟೀಸರ್ ಬಿಡುಗಡೆಗೊಂಡ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ಸಂಚಿತ್‌ಗೆ ಅದ್ದೂರಿ ಸ್ವಾಗತ ಸಿಕ್ಕಿದೆ.

ಸುದೀಪ್‌ನ ಪ್ರೇರಣಾದಾಯಕ ಪೋಸ್ಟ್: ಅಭಿಮಾನಿಗಳನ್ನು ಉತ್ಸಾಹಗೊಳಿಸಲು ನಟ ಕಿಚ್ಚಾ ಸುದೀಪ್ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ಅಧಿಕಾರವಿರುವ ಜನರು ಯುದ್ಧಗಳನ್ನು ಗೆಲ್ಲುತ್ತಾರೆ. ಆದರೆ ಇಚ್ಛಾಶಕ್ತಿ ಹೊಂದಿರುವವರು ಸಾಮ್ರಾಜ್ಯಗಳನ್ನು ನಿರ್ಮಿಸುತ್ತಾರೆ” ಎಂಬ ಶಕ್ತಿಶಾಲಿ ವಾಕ್ಯದ ಮೂಲಕ ತಮ್ಮ ಸೋದರಳಿಯನ ಮೊದಲ ಸಿನಿಮಾಗೆ ಶುಭ ಹಾರೈಸಿದ್ದಾರೆ.

ಸುದೀಪ್ ಅವರ ಈ ಟ್ವೀಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಂಚಿತ್‌ಗೆ ಹೊಸ ಉತ್ಸಾಹ ತುಂಬುವಂತೆ ಮಾಡಿದೆ.

ಚಿತ್ರದ ಕಥಾವಸ್ತು: ಮ್ಯಾಂಗೋ ಪಚ್ಚ ಮೈಸೂರು 2001-02ರ ಹಿನ್ನೆಲೆಯನ್ನು ಆಧರಿಸಿಕೊಂಡು, ಸ್ಥಳೀಯ ಸಾಮ್ರಾಜ್ಯದೊಳಗಿನ ನಿಷ್ಠೆ, ವಂಚನೆ ಮತ್ತು ಶಕ್ತಿಯ ಹೋರಾಟದ ಕಥೆಯನ್ನು ಹೇಳುತ್ತದೆ. “ಒಂದು ದಶಕದ ದೀರ್ಘಗಾಥೆಯನ್ನು ಸಿನಿಮಾ ವಿವರಿಸುತ್ತದೆ” ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಕಥೆಯು ಸ್ಥಳೀಯತೆಯನ್ನು ಕಳೆದುಕೊಳ್ಳದೆ ಆಕರ್ಷಕ ಕತೆ ಹೇಳುವಿಕೆಗೆ ಒತ್ತು ನೀಡಿದ್ದು, ಪ್ರೇಕ್ಷಕರಿಗೆ ಮರೆಯಲಾಗದ ಪಾತ್ರಗಳು ಮತ್ತು gripping narrative ನೀಡುವುದಾಗಿ ಭರವಸೆ ನೀಡಲಾಗಿದೆ.

ತಾಂತ್ರಿಕ ತಂಡ: ಸಂಚಿತ್ ಸಂಜೀವ್ ಅಭಿನಯಿಸಿರುವ ಈ ಚಿತ್ರವನ್ನು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ನಿರ್ಮಿಸಿದೆ. ತಾಂತ್ರಿಕವಾಗಿ ಬಲಿಷ್ಠವಾಗಿರುವ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಾತ್ಮಕ ತಿರುವು ನೀಡಲಿದೆ ಎಂಬ ನಿರೀಕ್ಷೆ ಮೂಡಿದೆ.

ಅಭಿಮಾನಿಗಳ ನಿರೀಕ್ಷೆ: ಟೀಸರ್ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಾವಿರಾರು ಅಭಿಮಾನಿಗಳು ಅದನ್ನು ಹಂಚಿಕೊಂಡಿದ್ದು, ಸಂಚಿತ್ ಸಂಜೀವ್ ಅವರ ಅಭಿನಯಕ್ಕೆ ಹಾರೈಕೆ ವ್ಯಕ್ತಪಡಿಸಿದ್ದಾರೆ. ‘ಜೂನಿಯರ್ ಕಿಚ್ಚಾ’ ಅವರ ಚಿತ್ರ Kannada industryಗೆ ಹೊಸ ಶಕ್ತಿ ತುಂಬಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version