Home ಸಿನಿ ಮಿಲ್ಸ್ ಧೂಳೆಬ್ಬಿಸಿದ ಕಾಂತಾರ-1 ಟ್ರೇಲರ್: ಕೆಲವೇ ತಾಸಲ್ಲಿ ಕೋಟಿ ಕೋಟಿ ಹಿಟ್ಸ್

ಧೂಳೆಬ್ಬಿಸಿದ ಕಾಂತಾರ-1 ಟ್ರೇಲರ್: ಕೆಲವೇ ತಾಸಲ್ಲಿ ಕೋಟಿ ಕೋಟಿ ಹಿಟ್ಸ್

0

‘ಕಾಂತಾರ’ ಚಿತ್ರದ ಮೂಲಕ ಜಾಗತಿಕ ಚಿತ್ರರಂಗ ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್-1’ ಮೂಲಕ ಮತ್ತೊಮ್ಮೆ ಹಿರಿತೆರೆಗೆ ಅಪ್ಪಳಿಸಲು ಸಿದ್ಧರಾಗಿದ್ದಾರೆ. ಅಕ್ಟೋಬರ್ 2ರಂದು ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್-1 ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಕೋಟಿ ಕೋಟಿ ಹಿಟ್ಸ್ ಪಡೆದಿದೆ.

ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಟ್ರೇಲ‌ರ್ ಬಿಡುಗಡೆಯಾಗಿದೆ. ಹಿಂದಿಯಲ್ಲಿ  ಈ ವರದಿ ಬರೆಯುವ  ಸಮಯಕ್ಕೆ ಯೂಟ್ಯೂಬ್‌ನಲ್ಲಿ 1 ಕೋಟಿ 92 ಲಕ್ಷಕೂ ಹೆಚ್ಚು ಹಿಟ್ಸ್ ಬಂದಿದೆ. ಇನ್ನುಳಿದ ಭಾಷೆಗಳಲ್ಲೂ ತಲಾ 60-80 ಲಕ್ಷ ಹಿಟ್ಸ್‌ಗಳು ಬಂದಿವೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ.

ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಾಪ್ಟರ್ -1 ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಅದಕ್ಕೂ ಮುನ್ನ ಟ್ರೇಲರ್ ಹರಿಬಿಟ್ಟಿದೆ ಚಿತ್ರತಂಡ. ನವರಾತ್ರಿಯ ಮೊದಲ ದಿನ ದಂತಕಥೆಯ ದೃಶ್ಯವೈಭವದ ದರ್ಶನ ಮಾಡಿಸಿದೆ ‘ಕಾಂತಾರ’ ಬಳಗ.

ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ ಕಾಂತಾರ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಕನ್ನಡ ಸೇರಿದಂತೆ ದೇಶದ ಏಳೆಂಟು ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ಬ್ಯಾನ‌ರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ತಾಂತ್ರಿಕತೆ ಹಾಗೂ ಅದ್ದೂರಿತನದ ಸೊಬಗು: ಸದ್ಯ ಬಿಡುಗಡೆಯಾಗಿರುವ ಟ್ರೇಲರ್ ನಲ್ಲಿ ಅದ್ಧೂರಿತನದಿಂದ ಕೂಡಿದ ಸೆಟ್, ನೂರಾರು ಜನ ಕಲಾವಿದರು. ತಾಂತ್ರಿಕತೆ ಹಾಗೂ ದೃಶ್ಯವೈಭವ ಜೋರಾಗಿಯೇ ಇದೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣವಿದೆ. ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸ ಹಾಗೂ ಕಲಾಕೃತಿಗಳು ಚಿತ್ರಕ್ಕೆ ಮೆರುಗು ಹೆಚ್ಚಿಸಿರುವುದು ‘ಕಾಂತಾರ’ದ ಹಚ್ಚುಗಾರಿಕೆ. ರುಕ್ಕಿಣಿ ವಸಂತ್ ಚಿತ್ರದ ನಾಯಕಿ. ಖ್ಯಾತನಟರಾದ ಗುಲ್ಯನ್‌ ದೇವಯ್ಯ, ಜಯರಾಂ ಮೂದಲಾದವರುವರು ಚಿತ್ರದಲ್ಲಿ ನಟಿಸಿದ್ದಾರೆ.

ಸ್ಟಾರ್‌ಗಳಿಂದ ಟ್ರೇಲರ್ ರಿಲೀಸ್: ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಮೊದಲಾದ ಭಾಷೆಗಳಲ್ಲಿ ‘ಕಾಂತಾರ-1’ ಟ್ರೇಲರ್ ರಿಲೀಸ್ ಆಗಿದೆ. ಆಯಾ ಭಾಷೆಗಳಲ್ಲಿ ಅಲ್ಲಿನ ಖ್ಯಾತ ಸ್ಟಾರ್‌ಗಳು ಟ್ರೇಲರ್ ಅನಾವರಣಗೊಳಿಸಿರುವುದು ವಿಶೇಷ, ಹೃತಿಕ್ ರೋಷನ್. ಪ್ರಭಾಸ್, ಶಿವಕಾರ್ತಿಕೇಯನ್ ಹಾಗೂ ಪೃಥ್ವಿರಾಜ್ ಸುಕುಮಾರ್ ‘ಕಾಂತಾರ’ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕನ್ನಡದಲ್ಲಿ ಮಾತ್ರ ಜನರೇ ಅವರವರ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಶೇರ್ ಮಾಡುವ ಮೂಲಕ ಬಿಡುಗಡೆ ಮಾಡಿದ್ದಾರೆ.

ಅತೀಂದ್ರಿಯ ಲೋಕದೊಳು: 2 ನಿಮಿಷ 56 ಸೆಕೆಂಡ್‌ಳ ‘ಕಾಂತಾರ-1’ ಟ್ರೇಲರ್‌ನಲ್ಲಿ ಕರಾವಳಿ ಕರ್ನಾಟಕದ ಅತೀಂದ್ರಿಯ ಲೋಕವನ್ನು ಅನಾವರಣಗೊಳಿಸಲಾಗಿದೆ. ಪುರಾಣ, ಭಕ್ತಿ ಮತ್ತು ಅದೃಷ್ಟದ ನಡುವಿನ ಪೌರಾಣಿಕ ಕಥೆಯನ್ನು ‘ಕಾಂತಾರ-1’ ತೆರೆದಿಡಲಿದೆ ಎಂಬ ಕುರುಹು ಟ್ರೇಲರ್‌ನಲ್ಲಿ ಕಾಣಸಿಕ್ಕಿದೆ. 

NO COMMENTS

LEAVE A REPLY

Please enter your comment!
Please enter your name here

Exit mobile version