ಬೆಂಗಳೂರು: ಕನ್ನಡ ಬಿಗ್ ಬಾಸ್‌ನ ಮಾಜಿ ಸ್ಪರ್ಧಿ ರಂಜಿತ್ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆಯಲ್ಲಿ ಅಕ್ಕ ಮತ್ತು ಪತ್ನಿ ನಡುವೆ ನಡೆದ ಗಲಾಟೆ ವಿಚಾರವಾಗಿ ರಂಜಿತ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ಬಂದೊದಗಿದೆ. ರಂಜಿತ್ ಪತ್ನಿ ಹಾಗೂ ಸಹೋದರಿ ನಡುವೆ ನಡೆದ ಮಾತಿನ ಚಕಮಕಿ ನಡೆದಿದ್ದು, ರಂಜಿತ್ ಅಕ್ಕನ ಗಂಡ ಜಗದೀಶ್ ಠಾಣೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.
ಇಬ್ಬರ ನಡುವೆ ನಡೆದ ಗಲಾಟೆಯ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್ ಆಗಿದ್ದು, ಕುಟುಂಬದ ವಿಷಯ ಈಗ ಬೀದಿಗೆ ಬಂದಿದೆ.
ನಾನು ನನ್ನ ಗಂಡನ ಮನೆಯಲ್ಲಿದೇನಿ ನೀನು ಮನೆಯಿಂದ ಹೋಗು, ಮಾನ ಮರ್ಯಾದೆ ಇಲ್ಲದೇ ದ್ರಾಕ್ಷಿ, ಗೋಡಂಬಿ ತಿಂತೀಯಾ. ರೇಷನ್ ನೀನ್ ತರತೀಯಾ? ಎಂದಿದ್ದಾರೆ. ಅಷ್ಟೇ ಅಲ್ಲದೇ ಚಪ್ಪರ್, ಭಿಕಾರಿ ಎಂದೆಲ್ಲ ರಂಜಿತ್ ಪತ್ನಿ ಮತ್ತು ರಂಜಿತ್ ಅಕ್ಕ ಬೈಯ್ದುಕೊಂಡಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ರಂಜಿತ್: ಕಿರುತೆರೆ ನಟ ರಂಜಿತ್, ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದರು. ಆಗ ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಜತೆ ಗಲಾಟೆ ಮಾಡಿಕೊಂಡಿದ್ದರು. ಈ ಕಾರಣದಿಂದ ಬಿಗ್ ಬಾಸ್ ಮನೆಯಿಂದಲೇ ರಂಜಿತ್ ಅವರನ್ನು ಹೊರ ಕಳಿಸಲಾಗಿತ್ತು.