Home ಸಿನಿ ಮಿಲ್ಸ್ ಡೆವಿಲ್ ಝಲಕ್‌ಗೆ ಅಭಿಮಾನಿಗಳು ಫಿದಾ: ದರ್ಶನ್ ಕಲರ್‌ಪುಲ್‌ ಅವತಾರ

ಡೆವಿಲ್ ಝಲಕ್‌ಗೆ ಅಭಿಮಾನಿಗಳು ಫಿದಾ: ದರ್ಶನ್ ಕಲರ್‌ಪುಲ್‌ ಅವತಾರ

0

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜ್‌ ಹುಟ್ಟು ಹಾಕಿದ ನಟ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ನಿರ್ದೇಶಕ ಮಿಲನ ಪ್ರಕಾಶ್ ಹೊಸ ಶೈಲಿ, ಮಾಸ್ ವಾತಾವರಣದೊಂದಿಗೆ ಟ್ರೈಲರ್‌ನಲ್ಲಿ ಸಂಪೂರ್ಣ ರಗಡ್‌ ಮೂಡ್‌ನ್ನು ಸ್ಥಾಪಿಸಿದ್ದಾರೆ.

ಟ್ರೈಲರ್‌ನಲ್ಲಿ ಏನು ಹೈಲೈಟ್? : ಟ್ರೈಲರ್ ಆರಂಭದಿಂದ ಕೊನೆಯವರೆಗೂ ದರ್ಶನ್‌ ಅವರ ಹೈ-ವೋಲ್ಟೇಜ್ ಮಾಸ್ ಪ್ರೆಸೆನ್ಸ್ ನೇರವಾಗಿ ಸ್ಕ್ರೀನ್‌ನ್ನು ಹಿಡಿದಿಟ್ಟಿದೆ. ಸ್ಪಾರ್ಕ್ ಆಗಿ ಸದ್ದು ಮಾಡುವ ಸಂಭಾಷಣೆ – ಟ್ರೈಲರ್ ಪೂರ್ಣ ಕ್ರೂರಿಯಾದ ಮಾಸ್ ಪ್ಯಾಕೇಜ್ ಆಗಿದೆ.

ದರ್ಶನ್ ಡೈಲಾಗ್ ಮಿಂಚು!: ಟ್ರೈಲರ್‌ನಲ್ಲೇ ಹಲವು ಡೈಲಾಗ್‌ಗಳು ಟ್ರೆಂಡಿಂಗ್ ಆಗಿದೆ, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳು ಡೈಲಾಗ್‌ಗಳು ರಿಪೀಟ್ ರೀಲ್‌ಗಳಲ್ಲಿ ರೀಮಿಕ್ಸ್ ಮಾಡ್ತಿದ್ದಾರೆ:

“ನಾನು ಬರ್ತೀನಿ ಚಿನ್ನಾ!”

“ಬ್ರದರ್ ಫ್ರಾಮ್ ಅನದರ್ ಮದರ್… ಆದರೆ ನಾಟ್ ಸೇಮ್ ಫಾದರ್.”

“ಎಲ್ಲಿ ಹೋದ್ರೂ ಬರ್ತಿರಲ್ಲೋ? ಏನೋ ನಿಮ್ಮ ಪ್ರಾಬ್ಲಂ.”

ಪ್ರತಿ ಡೈಲಾಗ್‌ಗೂ ಪಂಚ್ ಇದ್ದು ನೆನಪಿನಲ್ಲಿ ಉಳಿಯುವ ಡೆವಿಲ್ ವೈಬ್ ಸೃಷ್ಟಿಸಿದೆ.

ಗಿಲ್ಲಿ ಪಾತ್ರದ ಝಲಕ್: ಬಿಗ್ ಬಾಸ್ ಮೂಲಕ ಜನಪ್ರಿಯರಾದ ಗಿಲ್ಲಿ, ಈ ಚಿತ್ರದಲ್ಲಿಯೂ ಖದರ್‌ ಡೈಲಾಗ ಮೂಲಕ ಗಮನ ಸೆಳೆದಿದ್ದಾರೆ.

ದರ್ಶನ್ ಈಗ ಜೈಲಿನಲ್ಲಿ ಇರುವ ಹಿನ್ನೆಲೆಯಲ್ಲಿ, ಟ್ರೇಲರ್ ಬಿಡುಗಡೆಯಿಂದ ಹಿಡಿದು ಸಿನಿಮಾ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳು ಹಾಗೂ ಕುಟುಂಬ ಮತ್ತು ದರ್ಶನ್‌ ಫ್ಯಾನ್ ಆರ್ಮಿ ಜವಬ್ದಾರಿ ಹೊತ್ತಿದೆ. ಪ್ಯಾನ್ ಇಂಡಿಯಾ ಕ್ರೇಜ್ ಹಿನ್ನಲೆಯಲ್ಲಿ ಎಲ್ಲ ಚಿತ್ರಗಳು ಬಹು ಭಾಷೆಯಲ್ಲಿ ಬೃಹತ್ತಾಗಿ ರಿಲೀಸ್ ಆಗುತ್ತಿರುವಾಗ, ‘ಡೆವಿಲ್’ ಕನ್ನಡದಲ್ಲೇ ರಿಲೀಸ್ ಆಗುತ್ತಿರುವುದು ಗಮನಾರ್ಹ.

ರಿಲೀಸ್ ದಿನಾಂಕ: ಡಿಸೆಂಬರ್ 11, 2025ರಂದು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಲಿದೆ. ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆಯೇ ಲಕ್ಷಾಂತರ ವೀಕ್ಷಣೆ ಪಡೆದು ಸೋಶಿಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version