ಬೆಂಗಳೂರು: “Expect the Unexpected” ಎಂಬ ಥೀಮ್‌ನಲ್ಲಿ ಆರಂಭವಾಗಲಿರುವ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಹನ್ನೊಂದು ವರ್ಷಗಳ ಭರ್ಜರಿ ಯಶಸ್ಸಿನ ಬಳಿಕ ಈಗ 12ನೇ ಸೀಸನ್‌ನಲ್ಲಿ ಕನ್ನಡಿಗರನ್ನು ರಂಜಿಸಲು ಬಿಗ್ ಬಾಸ್ ಮನೆ ಈಗಾಗಲೇ ಸಿದ್ಧಗೊಂಡಿದೆ.
ಸೆಪ್ಟೆಂಬರ್ 28ರಂದು ಭಾನುವಾರ ಬಿಗ್‌ಬಾಸ್ ಸೀಸನ್ 12ಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ವೀಕೆಂಡ್‌ನಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಇಡೀ ವಾರದ ಕಥೆ ಕಿಚ್ಚನ ಪ್ರಸಾರವಾಗಲಿರುವ . ಅಲ್ಲದೇ ಜಿಯೋ ಹಾಟ್‌ಸ್ಟಾರ್‍ನಲ್ಲಿ ವೀಕ್ಷಿಸಬಹುದಾಗಿದೆ.
ಓಹ್.. ಭ್ರಮೆ!: ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಬಿಗ್ ಬಾಸ್ ಪ್ರೋಮೊ 10 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. AI ತಂತ್ರಜ್ಞಾನ ಬಳಸಿಕೊಂಡು ಮಾಡಿರುವ ಈ ಪ್ರೋಮೊದಲ್ಲಿ ಸುದೀಪ್ ಕಾಗೆ ಮತ್ತು ನರಿಯ ಕಥೆ ಹೇಳಿ ಎಲ್ಲವೂ ಗೊತ್ತು ಎನ್ನುವವರಿಗೆ “ಓಹ್.. ಭ್ರಮೆ!” ಇದರಲ್ಲಿಯೂ ಟ್ವಿಸ್ಟ್ ಇದೆ ಎಂದು ಹೇಳಿದ್ದಾರೆ.
ಮೂಲಕ ಪ್ರೋಮೊ ಮೂಲಕವೇ ಈ ಬಾರಿಯ ಬಿಗ್ ಬಾಸ್ ವಿಭಿನ್ನ ಮತ್ತು ವಿಶೇಷತೆಯನ್ನು ಒಳಗೊಂಡಿದೆ ಎಂದು ಸುದೀಪ್ ಉತ್ತರಿಸಿದ್ದಾರೆ. ಬಿಗ್ ಬಾಸ್ ಬಗ್ಗೆ ನಮಗೆಲ್ಲಾ ಗೊತ್ತು ಎನ್ನುವವರ ಬಾಯಿ ಸುದೀಪ್ ಮುಚ್ಚಿಸಿದ್ದಾರೆ. ಅಷ್ಟೇ ಅಲ್ಲ ಸುದೀಪ್ ಲುಕ್ ಮತ್ತು ಸ್ಟೈಲ್ ಕೂಡ ಡಿಫರೆಂಟ್ ಆಗಿಯೇ ಮಾಡಿದ್ದಾರೆ.
ಸುದೀಪ್ ಮಾತಿಗಾಗಿ ಕಾಯುತ್ತಿರುವ ಪ್ರೇಕ್ಷಕರು: ವಾರಾಂತ್ಯದಲ್ಲಿ ವಾರದ ಕಥೆ ಕಿಚ್ಚನ ಜತೆ ಕೇಳುವುದು ಒಂದು ವಿಶೇಷ. ತಮ್ಮ ವಿಭಿನ್ನ ಕಾಸ್ಟ್ಯೂಮ್ಸ್ ಮತ್ತು ಐಕಾನಿಕ್ ಧ್ವನಿ, ಕಣ್ಸೆಳೆಯೋ ನಗು, ಸಮಸ್ಯೆಗಳನ್ನು ಪರಿಹರಿಸೋ ಚಾಣಾಕ್ಷತೆ ಮತ್ತು ತಪ್ಪಿದವರನ್ನು ತಿದ್ದುವ ಗಟ್ಟಿತನ, ಸ್ಪರ್ಧಿಗಳಿಗೆ ನೀಡುವ ಸಂದೇಶ ಎಲ್ಲವನ್ನೂ ನೋಡಲು ಪ್ರೇಕ್ಷಕರು ಕಾಯುತ್ತಾ ಕುಳಿತಿದ್ದಾರೆ.
ಹೇಗಿರಲಿದೆ ದೊಡ್ಮನೆ: ‘ಬಿಗ್ ಬಾಸ್’ ಮನೆ ಎಂದರೆ ಅದರ ವಿಶೇಷತೆಯೇ ಬೇರೆ. ಕ್ಯಾಮೆರಾಗಳಿಂದ ತುಂಬಿರುವ ಮನೆಯಲ್ಲಿ ಪ್ರತಿಯೊಂದು ಕ್ಷಣವನ್ನು ಸೆರೆ ಹಿಡಿಯಲಾಗುತ್ತದೆ. ವಿಭಿನ್ನ ಪ್ರವೇಶ, ಡಿಫರೆಂಟ್ ಕೋಣೆ, ಅಡುಗೆ ಮನೆ, ಸ್ವಿಮಿಂಗ್ ಫೂಲ್ ಹೀಗೆ ಎಲ್ಲವೂ ಭಿನ್ನ ವಿಭಿನ್ನವಾಗಿ ಕೂಡಿರುತ್ತವೆ. ಈ ಬಾರಿ ಮತ್ತಷ್ಟು ಭಿನ್ನವಾಗಿ ಹಲವು ವಿಶೇಷತೆಯನ್ನು ಬಿಗ್ ಬಾಸ್ ಮನೆ ಹೊಂದಿದೆ.
ಬಿಗ್ ಬಾಸ್ ಸ್ಪರ್ಧಿಗಳು: ಬಿಗ್ ಬಾಸ್ ಮನೆಗೆ ಈ ಬಾರಿಯ ಸದಸ್ಯರೂ ಕೂಡ ಡಿಫರೆಂಟ್ ಎಂದು ಹೇಳಲಾಗಿದೆ. ನಟ – ನಟಿಯರು, ಸಿಂಗರ್ಸ್, ಹಾಸ್ಯಕಾರರು, ಕುಕ್ಸ್ ಮತ್ತು ಯೂಟ್ಯೂಬ್‌ರ್ಸ್ ಹೀಗೆ ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳನ್ನು ಸೇರಿಸಿ ಬಿಗ್ ಬಾಸ್ ಮನೆಯಲ್ಲಿ ಒಟ್ಟುಗೂಡಿಸಲಾಗುತ್ತಿದೆ. ವಿಭಿನ್ನ ಕ್ಷೇತ್ರದ ಭಿನ್ನ ಭಿನ್ನ ಮನಸಿನ ಸ್ಪರ್ಧಿಗಳು ಈ ಬಾರಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.