Home ಸಿನಿ ಮಿಲ್ಸ್ Bigg Boss Kannada 12: ಬಿಗ್‌ ಬಾಸ್‌ ಸ್ಪರ್ಧಿಗಳ ಹೆಸರು ರಿವೀಲ್ – ಇಲ್ಲಿದೆ ಪಟ್ಟಿ

Bigg Boss Kannada 12: ಬಿಗ್‌ ಬಾಸ್‌ ಸ್ಪರ್ಧಿಗಳ ಹೆಸರು ರಿವೀಲ್ – ಇಲ್ಲಿದೆ ಪಟ್ಟಿ

0

ಬೆಂಗಳೂರು: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ 12ರಲ್ಲಿ ಯಾರೆಲ್ಲಾ ಮನೆ ಪ್ರವೇಶ ಮಾಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ದುಪ್ಪಟ್ಟಾಗಿದೆ.

ಈಗಾಗಲೇ ಬಿಗ್‌ ಬಾಸ್‌ನ ಎರಡು ಪ್ರೋಮೋಗಳು ಬಿಡುಗಡೆಯಾಗಿವೆ. ಎಲ್ಲರೂ ರೆಡಿ, ನಾನೂ ರೆಡಿ ಎಂದು ಮೊದಲನೇ ಪ್ರೋಮೋದಲ್ಲೇ ಬಿಗ್‌ ಬಾಸ್‌ ಮನೋರಂಜನೆಗೆ ಸಿದ್ಧ ಎಂದು ನಟ, ಬಿಗ್‌ ಬಾಸ್‌ ನಿರೂಪಕ ಕಿಚ್ಚ ಸುದೀಪ್‌ ಹೇಳಿದ್ದರು.

ಎರಡನೇ ಪ್ರೋಮೋದಲ್ಲಿ ಕಥೆ ಹೇಳಿರುವ ಕಿಚ್ಚ ಮತ್ತಷ್ಟು ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದ್ದಾರೆ. ಇದಕ್ಕೆ ಎಐ ಟಚ್ ನೀಡಲಾಗಿದ್ದು, ಇದೇ ಈ ಬಾರಿಯ ಕಾನ್ಸೆಪ್ಟ್ ಎನ್ನುವ ಚರ್ಚೆ ಪ್ರೇಕ್ಷಕರಲ್ಲಿ ಶುರುವಾಗಿದೆ.

ಕಿಚ್ಚನ ಕಥೆಯಲ್ಲಿ ಕಾಗೆ – ನರಿ: ಬಿಗ್ ಬಾಸ್ 12ರ ಪ್ರೋಮೋದಲ್ಲಿ ಸುದೀಪ್ ಕೇವಲ ಕಥೆಗಾರನಾಗಿ ಸಹ ಕಾಣಿಸಿಕೊಂಡಿದ್ದಾರೆ. ಒಂದು ಕಾಗೆ ಮತ್ತು ನರಿ ಕುರಿತಾದ ಪ್ರಸಿದ್ಧ ಕಥೆಯನ್ನು ತಮ್ಮದೇ ಶೈಲಿಯಲ್ಲಿ ಹೇಳಿಕೊಂಡು ಹೋಗುತ್ತಾರೆ. ಕಥೆಯಲ್ಲಿ ಕಾಗೆಯ ಬುದ್ಧಿ, ನರಿಯ ಚಾಣಾಕ್ಷತನ ಹಾಗೂ ತಮಾಷೆಯ ಮಿಶ್ರಣವನ್ನು ತೋರಿಸುತ್ತಾರೆ. ಇದು ಕೇವಲ ಮಕ್ಕಳ ಕಥೆಯಲ್ಲ, ಬಿಗ್ ಬಾಸ್ ಮನೆಯೊಳಗೆ ನಡೆಯುವ ಆಟ, ತಂತ್ರ, ಬುದ್ಧಿವಂತಿಕೆ ಮತ್ತು ಅಸಾಧಾರಣ ತಿರುಗಾಟಗಳ ಸಂಕೇತ ಎಂದು ಬಣ್ಣಿಸಲಾಗಿದೆ.

ಕಂಟೆಸ್ಟೆಂಟ್ ಲಿಸ್ಟ್ ವೈರಲ್: ಸೆಪ್ಟೆಂಬರ್ 28 ರಿಂದ ಆರಂಭವಾಗಲಿರುವ ಆಟದಲ್ಲಿ ಮನೆಯೊಳಗೆ ಹೋಗುವ ಸ್ಪರ್ಧಿಗಳು ಯಾರು? ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸಹಜವಾಗಿದೆ. ಅಲ್ಲದೇ 18 ಜನರ ಪಟ್ಟಿಯೊಂದು ವೈರಲ್‌ ಆಗಿದ್ದು ಇವರೇ ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು ಎಂದು ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿ ಯಾರೆಲ್ಲ ಹೆಸರಿದೆ, ಎನ್ನುವ ವಿವರ ಇಲ್ಲಿದೆ ನೋಡಿ.

01. ಸ್ವಾತಿ
02. ಸಾಗರ್ ಬಿಳಿಗೌಡ
03. ಸಂಜನಾ ಬುರ್ಲಿ
04. ಸಮೀರ್ ಎಂಡಿ
05. ದಿವ್ಯಾ ವಸಂತ್
06. ಗಗನ್ ಶ್ರೀನಿವಾಸ್ (ಡಾ. ಬ್ರೋ)
07. ಶ್ವೇತಾ ಪ್ರಸಾದ್
08. ಮೇಘಾ ಶೆಟ್ಟಿ
09. ಅರವಿಂದ್ ರತ್ನನ್
10. ಪಯಲ್ ಚಂಗಪ್ಪ
11. ವರುಣ್ ಆರಾಧ್ಯ
12. ಗಗನಾ ಬಾರಿ
13. ವಿಜಯ್ ಸೂರ್ಯ
14. ದೀಪಿಕಾ ಗೌಡ
15. ಧನುಷ್,
16. ಅಮೃತಾ ರಾಮಮೂರ್ತಿ
17. ಸಿಂಗರ್ ಸುನೀಲ್
18. ಬಾಲು ಬೆಳಗುಂದಿ

ಬಿಗ್‌ ಬಾಸ್‌ ಮನೆಗೆ ಹೋಗುವವ ಪಟ್ಟಿಯಲ್ಲಿ ಕಿರುತೆರೆ, ಹಿರಿತೆರೆಯಲ್ಲಿ ಖ್ಯಾತಿ ಪಡೆದಿರುವ ನಟಿ ಸ್ವಾತಿ ಹೆಸರು ಮೊದಲ ಸ್ಥಾನದಲ್ಲಿಯೆ ಇದೆ. ಎರಡನೇ ಸಂಖ್ಯೆಯಲ್ಲಿ ಸತ್ಯ ಧಾರವಾಹಿ ನಾಯಕ ಸಾಗರ್ ಬಿಳಿಗೌಡ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಟಿ ಸಂಜನಾ ಬುರ್ಲಿ ಹೆಸರು ಕ್ರಮವಾಗಿ 2 ಮತ್ತು 3ರಲ್ಲಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಎಐ ವಿಡಿಯೋ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ಬಳ್ಳಾರಿ ಮೂಲದ ಯೂಟ್ಯೂಬರ್ ಮತ್ತು ಕಂಟೆಂಟ್ ಕ್ರಿಯೇಟರ್ ಸಮೀರ್ ಎಂ.ಡಿ., ನಮಸ್ಕಾರ ದೇವ್ರು… ಎನ್ನುತ್ತಲೇ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗಿರುವ ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್, ಖಾಸಗಿ ಚಾನೆಲ್​ನಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ವಸಂತ್ ಕೂಡ ದೊಡ್ಮನೆಯಲ್ಲಿ ಇರಲಿದ್ದಾರೆ.

ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಶ್ವೇತಾ ಪ್ರಸಾದ್, ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಮನೆಮಾತಾಗಿರುವ ಮೇಘಾ ಶೆಟ್ಟಿ, ಸಂಖ್ಯಾಶಾಸ್ತ್ರಜ್ಞ ಅರವಿಂದ್ ರತನ್‌, ʻಅಮೃತಾಂಜನ್’ ಖ್ಯಾತಿಯ ನಟಿ ಪಾಯಲ್ ಚೆಂಗಪ್ಪ, ʻಬೃಂದಾವನ’ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸಿರುವ ವರುಣ್ ಆರಾಧ್ಯ ಹೆಸರುಗಳು ಪಟ್ಟಿಯಲ್ಲಿವೆ.

ರಾಜಕುಮಾರಿ ಧಾರವಾಹಿಯಲ್ಲಿ ನಟಿಸುತ್ತಿರುವ ಗಗನಾ, ಅಗ್ನಿಸಾಕ್ಷಿ ಧಾರಾವಾಹಿಯಿಂದ ಜನಪ್ರಿಯತೆ ಪಡೆದಿರುವ ವಿಜಯ್ ಸೂರ್ಯ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಹಾಸ್ಯ ಕಲಾವಿದೆ ದೀಪಿಕಾ ಗೌಡ, ನಟಿ ಅಮೃತಾ ರಾಮಮೂರ್ತಿ, ಸರಿಗಮಪ ವಿಜೇತ ಗಾಯಕ ಸುನೀಲ್ ಗುಜಗೊಂಡ ಮತ್ತು ಬಾಲು ಬೆಳಗುಂದಿ ಸೇರಿ 18 ಜನ ಸ್ಪರ್ಧಿಗಳು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಸ್ಪರ್ಧಿಗಳು ಎಂದು ಪಟ್ಟಿಯಲ್ಲಿ ಹೇಳಲಾಗಿದೆ.

    NO COMMENTS

    LEAVE A REPLY

    Please enter your comment!
    Please enter your name here

    Exit mobile version