ಮುಂಬೈ: ಬಾಲಿವುಡ್ ಬಾದಶಾ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ವೆಬ್‌ಸಿರೀಸ್ ‘ದಿ ಬಾ*ಡ್ಸ್ ಆಫ್ ಬಾಲಿವುಡ್’ ಜಾಗತಿಕವಾಗಿ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಪ್ರಥಮ ಪ್ರದರ್ಶನ ಕಂಡಿದೆ. ಬಹು ನಿರೀಕ್ಷಿತ ಈ ಡಿಜಿಟಲ್ ಪ್ರಾಜೆಕ್ಟ್ ಪ್ರೇಕ್ಷಕರ ಮನ ಸೆಳೆಯುತ್ತಿದ್ದರೂ, ಒಂದು ಅಂಶ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ.
ತಮನ್ನಾ ಭಾಟಿಯಾ ಅಭಿನಯದ ವಿಶೇಷ ಗೀತೆಯಾದ ‘ಗಫೂರ್’ ಸಾಂಗ್ ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬಿಡುಗಡೆಗೂ ಮುನ್ನ ಪ್ರಚಾರ ಹಂತದಲ್ಲೇ ಈ ಹಾಡು ದೊಡ್ಡ ಮಟ್ಟದ ಕುತೂಹಲ ಹುಟ್ಟಿಸಿತ್ತು. ಅನೇಕರು ಆರ್ಯನ್ ಖಾನ್ ಅವರ ನಿರ್ದೇಶನದ ಮೊದಲ ಪ್ರಾಜೆಕ್ಟ್‌ನಲ್ಲಿ ತಮನ್ನಾ ಅವರ ಸ್ಪೆಷಲ್ ನಂಬರ್ ಒಂದು ಮುಖ್ಯ ಆಕರ್ಷಣೆ ಆಗಲಿದೆ ಎಂದು ನಿರೀಕ್ಷಿಸಿದ್ದರು. ಆದರೆ ಸ್ಟ್ರೀಮಿಂಗ್ ವೇಳೆ ಆ ಹಾಡು ಕಾಣಿಸದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಚರ್ಚೆಗಳು ಬಿರುಸುಗೊಂಡಿದ್ದು, “ಗಫೂರ್ ಹಾಡು ಏಕೆ ತೆಗೆಯಲಾಗಿದೆ?” ಎಂಬ ಪ್ರಶ್ನೆ ಅನೇಕ ಪೋಸ್ಟ್‌ಗಳಲ್ಲಿ ಮೂಡಿಬಂದಿದೆ. ಕೆಲವರು ಇದು ತಾಂತ್ರಿಕ ಸಮಸ್ಯೆಯೇ ಅಥವಾ ಇಚ್ಛಾಪೂರ್ವಕ ನಿರ್ಧಾರವೇ ಎಂಬ ಅನುಮಾನ ವ್ಯಕ್ತಪಡಿಸಿದರು.
ನಿರ್ಮಾಪಕರ ಸ್ಪಷ್ಟನೆ: ಅಭಿಮಾನಿಗಳ ಕುತೂಹಲಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕರು, “ಗಫೂರ್ ಹಾಡು ಯಾವುದೇ ಕಾರಣಕ್ಕಾಗಿ ಶಾಶ್ವತವಾಗಿ ತೆಗೆದುಹಾಕಿಲ್ಲ. ಪ್ರಸ್ತುತ ಹಕ್ಕು ಸಂಬಂಧಿತ ತಾಂತ್ರಿಕ ಅಡೆತಡೆಗಳ ಕಾರಣದಿಂದ ಸ್ಟ್ರೀಮಿಂಗ್‌ನಲ್ಲಿ ಸೇರಿಸಲಾಗಲಿಲ್ಲ. ಶೀಘ್ರದಲ್ಲೇ ಅದನ್ನು ಅಪ್ಡೇಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಭಿಮಾನಿಗಳು ನಿರಾಶರಾಗಬಾರದು” ಎಂದು ಹೇಳಿದ್ದರು.
T-Seriesನಲ್ಲಿ ಬಿಡುಗಡೆಗೊಂಡ ಹಾಡು: ಇಂದು ಮದ್ಯಾಹ್ನ ಟಿ ಸಿರಿಸ್‌ನಲ್ಲಿ ಬಿಡುಗಡೆಗೊಂಡ ಬಳಿಕ ಕೇವಲ 1 ಗಂಟೆಯಲ್ಲಿ 2 ಲಕ್ಷಕ್ಕೂ ಸಮೀಪ ನೋಟಗಳನ್ನು ಕಂಡಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ
ಆರ್ಯನ್ ಖಾನ್ ಅವರ ನಿರ್ದೇಶನದ ಮೊದಲ ಚಿತ್ರವೇ ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಕಥನ ಶೈಲಿ ಮತ್ತು ತಾಂತ್ರಿಕ ಜಾಣ್ಮೆಗೆ ಪ್ರಶಂಸೆ ದೊರೆಯುತ್ತಿದೆ. ಆದರೆ ‘ಗಫೂರ್’ ಹಾಡಿನ ಲೋಪವು ಅಭಿಮಾನಿಗಳಿಗೆ ತಾತ್ಕಾಲಿಕ ನಿರಾಶೆಯನ್ನು ತಂದಿದೆ ಎನ್ನಬಹುದು.