Home ಸುದ್ದಿ ರಾಜ್ಯ ಆಸ್ಪತ್ರೆಗೆ ದಾಖಲಾದ ಮಾಳವಿಕಾ

ಆಸ್ಪತ್ರೆಗೆ ದಾಖಲಾದ ಮಾಳವಿಕಾ

0

ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆ ಬೆಡ್ ಮೇಲೆ ಮಲಗಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಅವರು ತಮಗಾದ ಆರೋಗ್ಯ ಸಮಸ್ಯೆಯನ್ನೂ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೇ, ಈ ರೀತಿ ಸಮಸ್ಯೆಯಾದಾಗ ನೆಗ್ಲೆಟ್ ಮಾಡಬೇಡಿ ಎಂದು ಸಲಹೆಯನ್ನೂ ಅವರು ನೀಡಿದ್ದಾರೆ. ತಮಗೆ ಮೈಗ್ರೇನ್‌ ಆಗಿ ಆಸ್ಪತ್ರೆಗೆ ದಾಖಲಾಗಿರುವ ಫೋಟೋ ಹಂಚಿಕೊಂಡಿದ್ದಾರೆ. ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಸೆಲ್ಫಿ ಹಂಚಿಕೊಂಡಿದ್ದಾರೆ. ಮಾಳವಿಕಾ ಮುಖ ಬದಲಾಗಿದೆ ನಾರ್ಮಲ್‌ ಆಗಿಲ್ಲ. ‘ಮೈಗ್ರೇನ್‌ನ ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಎಲ್ಲಾ ಮತ್ತು ವಿವಿಧ ಪಾನಡೋಲ್‌ಗಳು, ನೆಪ್ರೊಸಿಮ್, ಸಾಂಪ್ರದಾಯಿಕ ಔಷಧ ಇತ್ಯಾದಿಗಳನ್ನು ಪಾಪಿಂಗ್ ಮಾಡುತ್ತಿರಿ. ಕೇವಲ ತಲೆನೋವು ಮಾತ್ರವಲ್ಲ. ಅಥವಾ ನೀವು ನನ್ನಂತೆಯೇ ಆಸ್ಪತ್ರೆಯಲ್ಲಿ ಕೊನೆಗೊಳ್ಳುತ್ತೀರಿ’ ಎಂದು ಮಾಳವಿಕಾ ಬರೆದುಕೊಂಡಿದ್ದಾರೆ.

Exit mobile version