ಶಿವಮೊಗ್ಗ: ಶಿವಮೊಗ್ಗ-ತಿರುನೆಲ್ವೇಲಿ ನಡುವೆ ನೈಋತ್ಯ ರೈಲ್ವೆ ಮೈಸೂರು ವಿಭಾಗ ವಿಶೇಷ ರೈಲು ಓಡಿಸಲಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಈ ರೈಲು ಓಡಿಸಲಾಗುತ್ತಿದ್ದು, ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ.
ರೈಲು ಸಂಖ್ಯೆ 06103 ತಿರುನೆಲ್ವೇಲಿ-ಶಿವಮೊಗ್ಗ ನಡುವೆ ಸಂಚಾರವನ್ನು ನಡೆಸಲಿದೆ. ರೈಲು ಸಂಖ್ಯೆ 06104 ಶಿವಮೊಗ್ಗ ಟೌನ್-ತಿರುನೆಲ್ವೇಲಿ ನಡುವೆ ಸಂಚಾರ ನಡೆಸಲಿದೆ. ಆಗಸ್ಟ್ 17, 18ರಂದು ರೈಲು ಸಂಚಾರವನ್ನು ನಡೆಸಲಿದೆ.
ರೈಲು ಸಂಖ್ಯೆ 06103 ತಿರುನೆಲ್ವೇಲಿ-ಶಿವಮೊಗ್ಗ ಟೌನ್ ತಿರುನೆಲ್ವೇಲಿಯಿಂದ 17/82025ರ ಭಾನುವಾರ 16:20ಕ್ಕೆ ಹೊರಡಲಿದ್ದು, ಸೋಮವಾರ 13:00 ಗಂಟೆಗೆ ಆಗಮಿಸಲಿದೆ.
ರೈಲು ಸಂಖ್ಯೆ 06104 ಶಿವಮೊಗ್ಗ ಟೌನ್-ತಿರುನೆಲ್ವೇಲಿ 18/8/2025ರ ಸೋಮವಾರ 14:20ಕ್ಕೆ ಹೊರಟು 10.45ರ ಮಂಗಳವಾರ ತಿರುನೆಲ್ವೇಲಿ ತಲುಪಲಿದೆ.
ಈ ರೈಲು ಟು ಟೈರ್ ಎಸಿ 1, ತ್ರಿ ಟೈರ್ ಎಸಿ 2, ಸ್ಲೀಪರ್ 9, ಜನರಲ್ 4, ಸಿಟ್ಟಿಂಗ್ ಕಮ್ ಲಗೇಜ್ ಕೋಚ್ 2 ಬೋಗಿಗಳನ್ನು ಹೊಂದಿದೆ.
ರೈಲು ಮಾರ್ಗದಲ್ಲಿ ಕಲ್ಲಿದೈಕುರ್ಚಿ, ಆಂಬಾಸಮುದ್ರಂ, ಕಿಜಕಡೈಯಂ, ಪವೂರುಚತ್ರಂ, ತೆಂಕಾಸಿ ಜಂಕ್ಷನ್, ಕಡಯನಲ್ಲೂರು, ಶಂಕರನ್ಕೊವಿಲ್, ರಾಜಪಾಳಯಂ, ಶ್ರೀವಿಲ್ಲಿಪುತ್ತೂರು, ಶಿವಕಾಶಿ, ವಿರುದುನಗರ ಜಂಕ್ಷನ್, ಮಧುರೈ ಜಂಕ್ಷನ್, ಕೊಡೈಕನಾಲ್ ರಸ್ತೆಯಲ್ಲಿ ನಿಲುಗಡೆ ಹೊಂದಿದೆ.
ಈ ರೈಲು ದಿಂಡಿಗುಲ್ ಜಂಕ್ಷನ್, ಕರೂರ್ ಜಂಕ್ಷನ್, ನಮಕ್ಕಲ್, ಸೇಲಂ ಜಂಕ್ಷನ್, ಕುಪ್ಪಂ, ಬಂಗಾರಪೇಟೆ ಜಂಕ್ಷನ್, ಕೃಷ್ಣರಾಜಪುರಂ, ಎಸ್‌ಎಂವಿಟಿ ಬೆಂಗಳೂರು, ಚಿಕ್ಕಬಣಾವರ, ತುಮಕೂರು, ಅರಸೀಕೆರೆ, ಬೀರೂರು, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.
ರೈಲು ಸೇವೆ ವಿಸ್ತರಣೆ ಮಾಹಿತಿ: ನೈಋತ್ಯ ರೈಲ್ವೆ ಹುಬ್ಬಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ ಅವಧಿ ವಿಸ್ತರಣೆ ಮಾಡಿ ಆದೇಶಿಸಿದೆ.
ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ ರೈಲು ಸಂಖ್ಯೆ 07355/ 07356 ಎಸ್‌ಎಸ್‌ಎಸ್ ಹುಬ್ಬಳ್ಳಿ ರಾಮೇಶ್ವರಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಆದರೆ, ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂವರೆಗಷ್ಟೇ ಸಂಚರಿಸಲಿದೆ. ಈ ರೈಲು ಈಗಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಚಲಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ.
ಈ ಹಿಂದೆ ಆಗಸ್ಟ್ 30ರ ತನಕ ಓಡಿಸಲು ಸೂಚಿಸಲಾಗಿದ್ದ ರೈಲು ಸಂಖ್ಯೆ 07355 ಎಸ್‌ಎಸ್‌ಎಸ್ ಹುಬ್ಬಳ್ಳಿ ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಸೆಪ್ಟೆಂಬರ್ 27ರ ತನಕ 4 ಟ್ರಿಪ್‌ಗಳಿಗೆ ವಿಸ್ತರಿಸಲಾಗಿದೆ. ಆದರೆ, ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಅದೇ ರೀತಿ ಆಗಸ್ಟ್ 31ರ ತನಕ ಸಂಚರಿಸಲು ಸೂಚಿಸಲಾಗಿದ್ದ ರೈಲು ಸಂಖ್ಯೆ 07356 ರಾಮೇಶ್ವರಂ -ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 28ರ ತನಕ 4 ಟ್ರಿಪ್‌ಗಳಿಗೆ ಚಲಿಸಲಿದೆ. ಇದು ರಾಮೇಶ್ವರದ ಬದಲಿಗೆ ರಾಮನಾಥಪುರಂನಿಂದ ತನ್ನ ಪ್ರಯಾಣ ಆರಂಭಿಸಲಿದೆ.