ಬೆಂಗಳೂರು ಮತ್ತು ಥೈಲ್ಯಾಂಡ್ ನಡುವೆ ಪ್ರವಾಸ ಮಾಡುವ ಜನರಿಗೆ ಸಿಹಿಸುದ್ದಿ ಇದೆ. ಅಕ್ಟೋಬರ್ 1 ರಿಂದ ಬೆಂಗಳೂರು ನಗರದಿಂದ ಥೈಲ್ಯಾಂಡ್‌ನ ಫುಕೆಟ್‍ಗೆ ಪ್ರತಿದಿನ ವಿಮಾನ ಹಾರಾಟ ಆರಂಭಿಸುವುದಾಗಿ ಆಕಾಶ ಏರ್ ಘೋಷಣೆ ಮಾಡಿದೆ.
ಈ ವಿಮಾನ ಸೇವೆಯ ಜೊತೆ ಗ್ರಾಹಕರಿಗೆ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಆಕಾಶ ಏರ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿರುವ ಗ್ರಾಹಕರು ಪ್ರೋಮೋ ಕೋಡ್ ಬಳಸಿ ತಮ್ಮ ಬುಕಿಂಗ್‍ಗಳಲ್ಲಿ ಶೇ 20ರಷ್ಟು ರಿಯಾಯಿತಿ ಪಡೆಯಬಹುದು
ಆಕಾಶ ಏರ್ ಅಕ್ಟೋಬರ್ 1, 2025ರಿಂದ ಬೆಂಗಳೂರನ್ನು ಥೈಲ್ಯಾಂಡ್‍ನ ಫುಕೆಟ್‍ನೊಂದಿಗೆ ಸಂಪರ್ಕಿಸುವ ದೈನಂದಿನ ನೇರ ವಿಮಾನಗಳನ್ನು ಘೋಷಿಸಿದೆ. ಆಕಾಶ ಏರ್ ಮುಂಬೈ ಮತ್ತು ಫುಕೆಟ್ ನಡುವೆ ದೈನಂದಿನ ನೇರ ಸೇವೆಯನ್ನು ಪ್ರಾರಂಭಿಸಿತು, ಹೆಚ್ಚಿನ ಬೇಡಿಕೆ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ವಿಮಾನ ಸೇವೆ ಪ್ರಾರಂಭಿಸಿತು.
ಈಗ ಬೆಂಗಳೂರು-ಪುಕೆಟ್ ವಿಮಾನ ಸೇವೆ ಪ್ರಾರಂಭಿಸಿದೆ. ಈ ವಿಮಾನ ಬೆಂಗಳೂರು ನಗರದಿಂದ ಪ್ರತಿದಿನ ಬೆಳಗ್ಗೆ 6:25ಕ್ಕೆ ಹೊರಟು ಮಧ್ಯಾಹ್ನ 12:40ಕ್ಕೆ ಫುಕೆಟ್ ತಲುಪಲಿದೆ. ಫುಕೆಟ್‌ನಿಂದ ದೈನಂದಿನ ವಿಮಾನಗಳು ಮಧ್ಯಾಹ್ನ 1:40ಕ್ಕೆ ಹೊರಟು ಸಂಜೆ 4:40ಕ್ಕೆ ಬೆಂಗಳೂರು ತಲುಪಲಿವೆ.
ಆಕಾಶ ಏರ್ ವೆಬ್‍ಸೈಟ್‌ನಲ್ಲಿ ಈಗಾಗಲೇ ವಿಮಾನಗಳ ಬುಕ್ಕಿಂಗ್ ಪ್ರಾರಂಭವಾಗಿದೆ. ಗ್ರಾಹಕರು ಈ ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.