ಮಂಗಳೂರು: ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಸರಕಾರಿ ನರ್ಮ್ ಬಸ್ ಸೇವೆ ಮತ್ತೆ ಪುನರಾರಂಭಗೊಂಡಿದ್ದು, ಪ್ರಯಾಣಿಕರಲ್ಲಿ ಸಂತಸವನ್ನುಂಟು ಮಾಡಿದೆ. ಇಂದು ಆರಂಭವಾದ ಗಣೇಶಪುರ ಜನತಾ ಕಾಲನಿ-ಮಂಗಳೂರು ನಡುವೆ ಸಂಚರಿಸುವ ಸರಕಾರಿ ನರ್ಮ್ ಬಸ್‌ಗೆ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಚಾಲನೆ ನೀಡಿದರು.
ಗಣೇಶಪುರ ಜನತಾ ಕಾಲನಿ-ಮಂಗಳೂರು ನಡುವೆ ಸಂಚರಿಸುತ್ತಿದ್ದ 45ಟಿ ನಂಬರ್‌ನ ಸರಕಾರಿ ನರ್ಮ್ ಬಸ್ ಕಳೆದೆರಡು ವರ್ಷದಿಂದ ಸ್ಥಗಿತಗೊಂಡಿದ್ದು ಸಾರ್ವಜನಿಕರ ಮನವಿಯ ಮೇರೆಗೆ ಶಾಸಕರ ಸತತ ಪ್ರಯತ್ನದ ಫಲವಾಗಿ ದುರ್ಗಾಪರಮೇಶ್ವರಿ ಆದಿಶಕ್ತಿ ದೇವಸ್ಥಾನ 3ನೇ ಬ್ಲಾಕ್ ಕಟಿಪಳ್ಳ ಬಸ್ಸು ತಂಗುದಾಣ ಬಳಿ ಪುನರಾರಂಭಗೊಂಡಿತು. ಬಸ್ಸಿಗೆ ಡಾ. ವೈ ಭರತ್ ಶೆಟ್ಟಿ ಚಾಲನೆ ಕೊಟ್ಟರು.
ಈ ಕುರಿತು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಗಣೇಶಪುರ ಜನತಾ ಕಾಲನಿ-ಮಂಗಳೂರು ನಡುವೆ ಸಂಚರಿಸುತ್ತಿದ್ದ 45-ಟಿ ನಂಬರ್ ಸರಕಾರಿ ನರ್ಮ್ ಬಸ್ಸು ಕಳೆದೆರಡು ವರ್ಷದಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಮನವಿಯ ಮೇರೆಗೆ ಇಂದು ದುರ್ಗಾಪರಮೇಶ್ವರಿ ಆದಿಶಕ್ತಿ ದೇವಸ್ಥಾನ 3ನೇ ಬ್ಲಾಕ್ ಕಾಟಿಪಳ್ಳ ಬಸ್ಸು ತಂಗುದಾಣ ಬಳಿ ಪುನರಾರಂಭಗೊಂಡ ಬಸ್ಸಿಗೆ ಚಾಲನೆ ನೀಡಿದೆವು’ ಎಂದು ಹೇಳಿದ್ದಾರೆ.