Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಮಂಗಳೂರು: ಖಾಸಗಿ ಬಸ್‌ಗಳಿಗೆ ಬಾಗಿಲು ಕಡ್ಡಾಯ- ರಾಮಲಿಂಗಾ ರೆಡ್ಡಿ

ಮಂಗಳೂರು: ಖಾಸಗಿ ಬಸ್‌ಗಳಿಗೆ ಬಾಗಿಲು ಕಡ್ಡಾಯ- ರಾಮಲಿಂಗಾ ರೆಡ್ಡಿ

0
ಸಾಂದರ್ಭಿಕ ಚಿತ್ರ

ಮಂಗಳೂರು: ಖಾಸಗಿ ಬಸ್‌ಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುವ ಬಸ್‌ಗಳಲ್ಲಿ ಬಾಗಿಲು ಕಡ್ಡಾಯವಾಗಿ ಇರುವುದನ್ನು ಖಾತರಿಪಡಿಸಿ. ಬಾಗಿಲುಗಳಿಲ್ಲದೆ ರಸ್ತೆಗೆ ಇಳಿಯುವ ಬಸ್‌ಗಳಿಗೆ ಯಾವುದೇ ಕಾರಣಕ್ಕೂ ಎಫ್‌ಸಿ ನೀಡಬೇಡಿ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ ಮಲ್ಲಾಡ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದರು.

ಜಿಲ್ಲೆಗೂ ಇ ಬಸ್‌: ನಗರದ ಮುಡಿಪುವಿನಲ್ಲಿರುವ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ವೀಕ್ಷಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ ಬಸ್‌ಗಳಿಗೆ ಈಗಾಗಲೆ ಬೇಡಿಕೆ ಸಲ್ಲಿಸಿದ್ದು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಲಿರುವ ಬಸ್‌ಗಳ ಖರೀದಿಗಾಗಿ ಟೆಂಡ‌ರ್ ಕರೆಯಬೇಕಾಗಿದೆ. ಇದಕ್ಕೆ ಕನಿಷ್ಟ ಆರು ತಿಂಗಳ ಸಮಯ ಬೇಕಾಗ ಬಹದು. ಕೇಂದ್ರ ಬಸ್‌ಗಳನ್ನು ಒದಗಿಸಿದರೆ ಮಂಗಳೂರಿಗೂ ಹಂಚಲಾಗುವುದು’ ಎಂದು ತಿಳಿಸಿದರು.

ಬಾಗಿಲು ಇಲ್ಲದ ಬಸ್‌ಗಳಿಗೆ ಎಫ್‌ಸಿ ಇಲ್ಲ: ಇನ್ನು ಬಾಗಿಲುಗಳಿಲ್ಲದೆ ರಸ್ತೆಗೆ ಇಳಿಯುವ ಬಸ್‌ಗಳಿಗೆ ಯಾವುದೇ ಕಾರಣಕ್ಕೂ ಎಫ್‌ಸಿ ನೀಡಬೇಡಿ, ಎಂದು ಸೂಚಿಸಿದ ಅವರು ತರಬೇತಿ ಕೇಂದ್ರದಲ್ಲಿ ಪ್ರಾಯೋಗಿಕ ತರಬೇತಿಗೆ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಇದನ್ನು ಪರಿಗಣಿಸಿ, ಅಗತ್ಯವಿರುವವರಿಗೆ ತರಬೇತಿ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ತರಬೇತಿಗಾಗಿ ಕೆಎಸ್‌ಆರ್‌ಟಿಸಿಯಿಂದ ಒಂದು ಬಸ್ ಪಡೆಯಲಾಗುವುದು, ಆದರೆ ಟ್ರಕ್ ಖರೀದಿಗೆ ಆರ್ಥಿಕ ಇಲಾಖೆಯ ಅನುಮತಿ ಬೇಕಾಗುತ್ತದೆ ಎಂದರು.

ದರ ಏರಿಕೆ ವಿರುದ್ಧ ಕ್ರಮ: ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ಹೆಚ್ಚುವರಿ ದರ ವಸೂಲಿಯನ್ನು ತಡೆಯಲು 2,300 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುವುದು. ಖಾಸಗಿ ಬಸ್‌ಗಳು ಹಬ್ದದ ಸಂದರ್ಭದಲ್ಲಿ ಟಿಕೆಟ್‌ ದರ ಏರಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಗಣೇಶ ಹಬ್ಬದ ಸಂದರ್ಭದಲ್ಲಿ 1200 ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version