Home ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ: ದ್ರಾಕ್ಷಿ ಬೆಳೆಗೆ ಥ್ರಿಪ್ಸ್ ರೋಗದ ಕಾಟ, ರೈತರ ಪರದಾಟ

ಚಿಕ್ಕಬಳ್ಳಾಪುರ: ದ್ರಾಕ್ಷಿ ಬೆಳೆಗೆ ಥ್ರಿಪ್ಸ್ ರೋಗದ ಕಾಟ, ರೈತರ ಪರದಾಟ

0

ಗಂಗನಹಳ್ಳಿ ಎಂ. ಮುನಿನಾರಾಯಣ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣ, ವಾತಾವರಣದಲ್ಲಿ ಹೆಚ್ಚಾಗಿರುವ ತೇವಾಂಶದಿಂದಾಗಿ ದಾಕ್ಷಿ ತೋಟಗಳಿಗೆ ಆವರಿಸಿಕೊಳ್ಳುತ್ತಿರುವ ಡೌನಿಮಿಲ್ಡ್‌ ರೋಗವನ್ನು ನಿಯಂತ್ರಣಕ್ಕೆ ತರಲು ದಾಕ್ಷಿ ಬೆಳೆಗಾರರು ಹರಸಾಹಸ ಪಡುತ್ತಿದ್ದಾರೆ.

ಪ್ರತಿನಿತ್ಯ ಬೆಳಗಿನ ಜಾವದಲ್ಲಿ ಮಂಜಿನ ಹನಿಗಳಂತೆ, ದಾಕ್ಷಿ ಎಲೆಗಳ ಮೇಲೆ ಬೀಳುತ್ತಿರುವ ಮಳೆಯ ಹನಿಗಳು ಹಾಗೂ ಮೋಡ ಮುಸುಕಿದ ವಾತಾವರಣದಿಂದಾಗಿ ಡೌನಿಮಿಲ್ಡ್ (ಎಲೆಗಳ ಹಿಂಭಾಗದಲ್ಲಿ ಪೌಡರ್ ಮಾದರಿಯಲ್ಲಿ) ರೋಗ ಕಾಣಿಸಿಕೊಂಡಿದೆ.

ಒಂದು ದಿನ ಔಷಧಿ ಸಿಂಪಡಣೆ ಮಾಡುವುದು ತಡವಾದರೆ, ರೋಗವು ವೇಗವಾಗಿ ತೋಟದಲೆಲ್ಲಾ ಹರಡಿಕೊಳ್ಳುತ್ತದೆ. ಈ ಕಾರಣದಿಂದ ರೋಗ ನಿಯಂತ್ರಣಕ್ಕಾಗಿ ನಿರಂತರವಾಗಿ ರಾಸಾಯನಿಕ ಔಷಧಿಗಳು ಸಿಂಪಡಣೆ ಮಾಡುವುದು ಅನಿವಾರ್ಯವಾಗಿದೆ. ಇದು ನಮಗೆ ದುಬಾರಿಯಾಗುತ್ತಿದೆ ಎನ್ನುತ್ತಾರೆ ರೈತರು.

ಡೌನಿಮಿಲ್ಡ್ ರೋಗಕ್ಕೆ ತುತ್ತಾಗುತ್ತಿರುವ ತೋಟಗಳಲ್ಲಿ, ರೋಗ ನಿಯಂತ್ರಣ ಮಾಡದಿದ್ದರೆ, ಕ್ರಮೇಣವಾಗಿ ಅಕ್ಕಪಕ್ಕದ ತೋಟಗಳಲ್ಲಿರುವ ಇತರೆ ಹಣ್ಣಿನ ಬೆಳೆಗಳಿಗೂ ಹರಡುತ್ತದೆ. ಈ ರೋಗವು ದಾಕ್ಷಿ ಎಲೆಗಳಲ್ಲಿನ ನೀರಿನ ಅಂಶವನ್ನೆಲ್ಲಾ ಹೀರಿಕೊಳ್ಳುತ್ತದೆ. ಪೌಡರ್ ಮಾದರಿಯಲ್ಲಿ ಗಾಳಿಯಲ್ಲಿ ಸಂಚರಿಸಿ, ಇತರೆ ಬೆಳೆಗಳ ಮೇಲೆ ಕೂರುತ್ತದೆ. ದಾಕ್ಷಿ ತೋಟಗಳಲ್ಲಿ ಪಾಲಿನೇಷನ್‌ ಆಗುತ್ತಿರುವ ದಾಕ್ಷಿಗೂ ಗೊಂಚಲುಗಳಿಗೂ ಕಂಟಕವಾಗುತ್ತಿದೆ.

ಬೆಳೆಯ ಗುಣಮಟ್ಟ ಹಾಳಾಗುವುದರ ಜೊತೆಗೆ ಇಳುವರಿಗೆ ಹೊಡೆತ ಬೀಳುತ್ತಿದೆ. ಇಳುವರಿ ಕುಂಠಿತವಾದರೆ ಬೆಳೆಗಾರರು ಹಾಕಿರುವ ಬಂಡವಾಳವೂ ಹೊರಡುವುದಿಲ್ಲ. ದ್ರಾಕ್ಷಿಗೆ ಬೆಲೆಯಿಲ್ಲದೆ ಕಂಗಾಲಾಗಿರುವ ಬೆಳೆಗಾರರು, ಗುಣಮಟ್ಟವಿಲ್ಲದ ಬೆಳೆ ಬೆಳೆದು ಸಾಲಗಾರರಾಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ದ್ರಾಕ್ಷಿ ಗೊಂಚಲುಗಳು ಪಾಲಿನೇಷನ್‌ (ಹೂವಿನಿಂದ ಕಾಯಿಯಾಗುವ ಸಮಯ) ಆಗುವ ಸಂದರ್ಭದಲ್ಲಿ ಮೋಡ ಮುಸುಕಿದ ವಾತಾವರಣದ ಜೊತೆಗೆ, ಬೆಳಗಿನ ಸಮಯದಲ್ಲಿ ಮಂಜಿನ ಹನಿಗಳಂತೆ ಮಳೆ ನೀರು ಉದುರುತ್ತಿರುವುದರಿಂದ ಎಷ್ಟು ಔಷಧಿಗಳು ಸಿಂಪಡಣೆ ಮಾಡಿದರೂ ರೋಗವನ್ನು ಹತೋಟಿಗೆ ತರುವುದಕ್ಕೆ ಕಷ್ಟವಾಗುತ್ತಿದೆ.

ಬೆಳೆಯಲ್ಲಿ ಇಳುವರಿ ಕಾಪಾಡುವುದಕ್ಕೂ ಕಷ್ಟವಾಗುತ್ತಿದೆ. ರೈತರು, ದಾಕ್ಷಿಗೆ ಬರುವ ರೋಗಗಳನ್ನು ತಡೆಗಟ್ಟಲು ವಿಪರೀತ ರಾಸಾಯನಿಕ ಬಳಕೆ ಮಾಡುತ್ತಿದ್ದಾರೆ. ದಾಕ್ಷಿಯಲ್ಲಿ ವಿಷಕಾರಕ ವಸ್ತುಗಳನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದ್ರಾಕ್ಷಿ ಬೆಳೆಗಾರರು ತೋಟಗಾರಿಕೆ ಇಲಾಖೆಯಿಂದ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.

ಗಂಗನಹಳ್ಳಿ ದ್ರಾಕ್ಷಿ ಬೆಳೆಗಾರ ರಮೇಶ್ ಮಾತನಾಡಿ, “ದಾಕ್ಷಿ ತೋಟಗಳಿಗೆ ಬಿದ್ದಿರುವ ಡೌನಿ ಮಿಲ್ಡ್ ರೋಗವನ್ನು ನಿಯಂತ್ರಣಕ್ಕೆ ತರುವುದಕ್ಕೆ ಔಷಧಿಗಳು ಸಿಂಪಡಣೆ ಮಾಡುತ್ತಿದ್ದೇವೆ. ಆರಂಭದಿಂದಲೇ ನಾವು ಜಾಗೃತರಾಗದಿದ್ದರೆ, ಬೆಳೆ ಕಳೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version