Home ನಮ್ಮ ಜಿಲ್ಲೆ ಬೆಂಗಳೂರು Namma Metro: ಹಳದಿ ಮಾರ್ಗಕ್ಕೆ ಏನಾಯ್ತು? ತಾಂತ್ರಿಕ ಕಂಟಕದಿಂದ ಪ್ರಯಾಣಿಕರಿಗೆ ತಲೆನೋವು!

Namma Metro: ಹಳದಿ ಮಾರ್ಗಕ್ಕೆ ಏನಾಯ್ತು? ತಾಂತ್ರಿಕ ಕಂಟಕದಿಂದ ಪ್ರಯಾಣಿಕರಿಗೆ ತಲೆನೋವು!

0

Namma Metro: ‘ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ಸಂಪೂರ್ಣ ತನ್ನ ಕಾರ್ಯವನ್ನು ಸುಗಮವಾಗಿ ನಿಭಾಯಿಸುತ್ತಿದೆ.ಹಾಗೇ ಮೆಟ್ರೋ ಚಾಲನೆಯಿಂದ ಜನರಿಗೆ ಸಮಯ ಉಳಿತಾಯದ ಜೊತೆ ಸರಿಯಾದ ವೇಳೆಗೆ ತಲುಪಿಸುವ ಕೆಲಸ ಮಾಡುತ್ತೆ. ಇದರಿಂದ ವಾಯುಮಾಲಿನ್ಯವನ್ನು ತಡೆಗಟ್ಟುವ ಮೂಲ ಉದ್ದೇಶ ಇದರದಾಗಿತ್ತು.

ಜನರಿಗೆ KSRT ಬಸ್ಸುಗಳಿಗೆ ಕಾಯುವ ಅವಶ್ಯಕತೆ ಇರುವುದಿಲ್ಲ. ಮೆಟ್ರೋ ದರವನ್ನು ಸಹ ಜನರಿಗೆ ಸಹಾಯಾಕ್ಕಾಗಿ ಶೇ% 50. ರಷ್ಟು ಕಡಿಮೆ ಮಾಡಲಾಗಿತ್ತು. ಮೆಟ್ರೋ ಸಾರಿಗರಯ ಕುರಿತಾಗಿ ಪ್ರಗತಿಗಾಗಿ ಮಾತುಕಥೆ ನಡೆಯುತ್ತಲೇ ಇರುತ್ತವೆ.

ಇಷ್ಟೆಲ್ಲಾ ಇರುವಾಗ ಇಂದು ಹಳದಿ ಮಾರ್ಗವಾಗಿ ಚಲಿಸುವ ಮೆಟ್ರೋ ರೈಲುನಲ್ಲಿ ಮುಂಜಾನೆ ತಾಂತ್ರಿಕವಾಗಿ ಸಮಸ್ಯೆ ಉಂಟಾಗಿತ್ತು. ಸಮಸ್ಯೆಯನ್ನು ಬಗೆಹರಿಸಲಾಗಿದೆ. ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ ಅವರಿಂದ ತಿಳಿಸಲಾಗಿದೆ.

ನಂತರ ಹಳದಿ ಮಾರ್ಗವಾಗಿ ಚಲಿಸುವ ಎಲ್ಲ ರೈಲುಗಳು ಎಂದಿನಂತೆ ಸಂಚರಿಸಲಿವೆ ಎಂದು ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ‘ಎಕ್ಸ್’ನಲ್ಲಿ ಬಿಎಂಆರ್‌ಸಿಎಲ್ ಅಧಿಕೃತ ಹೇಳಿಕೆ ನೀಡಿದೆ. ‘ಬುಧವಾರ ಬೆಳಿಗ್ಗೆ ಹಳದಿ ಮಾರ್ಗದ ಒಂದು ರೈಲಿನಲ್ಲಿ ತಾಂತ್ರಿಕ ತೊಂದರೆ ಉಂಟಾದ ಕಾರಣ, ರೈಲು ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇತ್ತು. ಪ್ರಯಾಣಿಕರಿಗೆ ಇದರಿಂದ ಉಂಟಾಗುವ ಅನಾನುಕೂಲತೆಗಳನ್ನ ವಿಷಾದಿಸುತ್ತೇವೆ’ ಎಂದು ಬಿಎಂಆರ್‌ಸಿಎಲ್ ಹೇಳಿತ್ತು.

ಇದಾದ ಬಳಿಕ ‘ತಾಂತ್ರಿಕ ಸಮಸ್ಯೆಯನ್ನು ಬೆಳಿಗ್ಗೆ 08:47 ಗಂಟೆಗೆ ಪರಿಹರಿಸಲಾಗಿದೆ. ಹಳದಿ ಮಾರ್ಗದ ಎಲ್ಲ ರೈಲುಗಳು ಈಗ ಎಂದಿನಂತೆ ಸೇವೆಯಲ್ಲಿ ಇವೆ. ರೈಲು ಸೇವೆಗಳು ಪುನರಾರಂಭಗೊಂಡಿದ್ದು, ಈಗ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ’ ಎಂದು ತಿಳಿಸಿದೆ. ಇದರಿಂದ ಜನರಲ್ಲಿ ಯಾವುದೇ ಗೂಂದಲ ಇರದೇ ದಿನನಿತ್ಯದ ವೇಳೆಗೆ ಪ್ರಯಾಣ ಮಾಡಬಹುದು ಎಂದಿದ್ದಾರೆ.

ಮೆಟ್ರೋನ ಹಳದಿ ಮಾರ್ಗದ ಒಂದು ರೈಲಿನಲ್ಲಿ ಇಂದು ತಾಂತ್ರಿಕ ತೊಂದರೆ ಉಂಟಾದ ಕಾರಣ, ರೈಲು ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರ ಮಾಹಿತಿಗಾಗಿ ತಿಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದರು.

ಈಗ ಸಮಸ್ಯೆಯನ್ನ ಪರಿಹರಿಸಲಾಗಿದೆ ಮತ್ತು ಹಳದಿ ಮಾರ್ಗದ ಎಲ್ಲಾ ರೈಲುಗಳು ಈಗ ಎಂದಿನಂತೆ ಸೇವೆಯಲ್ಲಿ ಇವೆ. ರೈಲು ಸೇವೆಗಳು ಪುನರಾರಂಭಗೊಂಡಿದ್ದು, ಈಗ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ. ಪ್ರಯಾಣಿಕರಿಗೆ ಯಾವುದೇ ಹಿಂಜರಿಕೆ ಇಲ್ಲದೆ ನಮ್ಮ ಮೆಟ್ರೋವಿನಿಂದ ಆರಾಮವಾಗಿ ಪ್ರಯಾಣಿಸಬಹುದು ಎಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version