Bangalore: ರಾಜಧಾನಿಯಲ್ಲಿ ಜಡ ತ್ಯಾಜ್ಯವನ್ನು ಸುರಿಯಲು ಶೀಘ್ರದಲ್ಲೇ ಒಂದು ಪ್ರತ್ಯೇಕ ಸ್ಥಳ ದೊರೆಯಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ನಗರದಾದ್ಯಂತ ಬಿದ್ದಿರುವ ಲಕ್ಷಾಂತರ ಟನ್ ಹಳೆಯ ತ್ಯಾಜ್ಯವನ್ನು ತೆರವುಗೊಳಿಸಲು ಸಜ್ಜಾಗಿದೆ ಎಂದು ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಅಂತಿಮ ಉತ್ಪನ್ನವಾದ ನೈಸರ್ಗಿಕವಾಗಿ ಅಥವಾ ರಾಸಾಯನಿಕವಾಗಿ ವಿಘಟನೆಯಾಗದಸುಮಾರು 800 ಟನ್ ಜಡ ತ್ಯಾಜ್ಯ ಪ್ರತಿದಿನ ಉತ್ಪತ್ತಿಯಾಗುತ್ತದೆ ಎಂದು
ಅಂದಾಜಿಸಲಾಗಿದೆ.ಬಿಎಸ್‌ಡಬ್ಲ್ಯೂಎಂಎಲ್ ಅಧಿಕಾರಿಗಳಿಂದ ಮಾಹಿತಿ ನೀಡಿದ್ದಾರೆ.
ಜಡ ತ್ಯಾಜ್ಯವನ್ನು ಸುರಿಯಲು ಬಿಎಸ್‌ಡಬ್ಲ್ಯೂಎಂಎಲ್ ಮಹಾದೇವಪುರದ ಕಡೆ ಅಗ್ರಹಾರದಲ್ಲಿ 18 ಎಕರೆ ಪ್ರದೇಶದಲ್ಲಿ ತನ್ನ ಕೆಲಸವನ್ನು ಪ್ರಾರಂಭಿಸಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಮುಂದಿನ ವರ್ಷದೊಳಗಾಗಿ ಜಡ ತ್ಯಾಜ್ಯವನ್ನು ಸುರಿಯುವುದು ಪ್ರಾರಂಭವಾಗುತ್ತದೆ ಎಂದರು.
ಇಲ್ಲವೇ 5 ವರ್ಷಗಳವರೆಗೆ ಸಮಯ ತೆಗೆದುಕೊಳ್ಳಬಹುದು, ಅದರ ನಂತರ ಇತರ ಪರ್ಯಾಯ ಮಾರ್ಗಗಳನ್ನು ಪರಿಗಣಿಸಲಾಗುತ್ತಿದೆ ಎಂದು ಬಿಎಸ್‌ಡಬ್ಲ್ಯೂಎಂಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಒಂದೇ ದಿನ 599 ಟನ್ ತ್ಯಾಜ್ಯ ತೆರವು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಒಂದೇ ದಿನ ನಗರಾದ್ಯಂತ 599 ಟನ್ ತ್ಯಾಜ್ಯವನ್ನು ತೆರವು ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಮಾತನಾಡಿ, ಸೀಗೆಹಳ್ಳಿ, ಕನ್ನಹಳ್ಳಿ ಮತ್ತು ಇತರ ತ್ಯಾಜ್ಯ ಸಂಸ್ಕರಣಾ ಘಟಕಗಳ ಪರಿಶೀಲನೆಯಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲು ಅಧಿ ಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಟ್ರೋಮೆಲ್ ಯಂತ್ರವನ್ನು ಬಳಸಿ ಮರು ಸಂಸ್ಕರಿಸಬೇಕು. ಕಸದಿಂದ ಪಡೆದ ಇಂಧನ (ಆರ್‌ಎಫ್‌ಡಿ) ತ್ಯಾಜ್ಯವನ್ನು ಬಿಡದಿಯಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕಳುಹಿಸಬೇಕು ಎಂದು ಸೂಚಿಸಿದರು. ಉತ್ಪಾದಿಸುವ ಜಡ ತ್ಯಾಜ್ಯವನ್ನು ಗೊತ್ತುಪಡಿಸಿದ ಪ್ರದೇಶದಲ್ಲಿ ಕಳುಹಿಸಬೇಕು ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಉನ್ನತ ಅಧಿಕಾರಿಯೊಬ್ಬರು ಹೇಳಿದರು.
ಬೆಂಗಳೂರಿನಲ್ಲಿ 1 ಕೋಟಿ ಟನ್‌ಗಳಿಗೂ ಹೆಚ್ಚು ಜಡ ತ್ಯಾಜ್ಯವಿದೆ ಎಂದು ಅಂದಾಜಿಸಲಾಗಿದೆ.ಜೈವಿಕ ಪರಿಹಾರದ ಮೂಲಕ ಪರಂಪರಾಗತ ತ್ಯಾಜ್ಯವನ್ನು ತೆರವುಗೊಳಿಸಲು, ಬಿಎಸ್‌ಡಬ್ಲ್ಯೂಎಂಎಲ್ ಟೆಂಡರ್‌ಗಳನ್ನು ಆಹ್ವಾನಿಸಿದ್ದು ಶೀಘ್ರದಲ್ಲೇ ಕೆಲಸ ಪ್ರಾರಂಭವಾಗುತ್ತದೆ. ಬಯೋರೆಮಿಡಿಯೇಶನ್ ಪ್ರಕ್ರಿಯೆಯಲ್ಲಿ, ನಾವು ಕಾಂಪೋಸ್ಟ್ ಮತ್ತು ಆರ್ ಎಫ್‌ಡಿಯನ್ನು ಪಡೆಯುತ್ತೇವೆ” ಎಂದು ಅಧಿಕಾರಿ ಹೇಳಿದರು.
