Home ನಮ್ಮ ಜಿಲ್ಲೆ ಬೆಂಗಳೂರು ದೀಪಾವಳಿ-2025: ಬೆಂಗಳೂರು-ತಾಳಗುಪ್ಪ ವಿಶೇಷ ರೈಲು, ವೇಳಾಪಟ್ಟಿ

ದೀಪಾವಳಿ-2025: ಬೆಂಗಳೂರು-ತಾಳಗುಪ್ಪ ವಿಶೇಷ ರೈಲು, ವೇಳಾಪಟ್ಟಿ

0

ದೀಪಾವಳಿ-2025ರ ಸಂದರ್ಭದಲ್ಲಿ ಬೆಂಗಳೂರು-ಶಿವಮೊಗ್ಗ, ಉತ್ತರ ಕನ್ನಡ ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿ ನೀಡಿದೆ. ಹಬ್ಬದ ಸಂದರ್ಭದಲ್ಲಿನ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನಡೆಸಲಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪೋಸ್ಟ್ ಹಾಕಿದ್ದಾರೆ. ರೈಲಿನ ವೇಳಾಪಟ್ಟಿಯನ್ನು ಸಹ ಪ್ರಯಾಣಿಕರ ಮಾಹಿತಿಗಾಗಿ ಹಾಕಿದ್ದಾರೆ. ಬೆಂಗಳೂರು ನಗರದ ಯಶವಂತಪುರ ನಿಲ್ದಾಣದಿಂದ ಶಿವಮೊಗ್ಗ ಜಿಲ್ಲೆಯ ಕೊನೆಯ ನಿಲ್ದಾಣವಾದ ತಾಳಗುಪ್ಪಗೆ ರೈಲು ಸಂಚಾರವನ್ನು ನಡೆಸಲಿದೆ.

ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ 06587. ಯಶವಂತಪುರ–ತಾಳಗುಪ್ಪ ವಿಶೇಷ ರೈಲು. ಅಕ್ಟೋಬರ್ 17 ಮತ್ತು 24 ರಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 4.15ಕ್ಕೆ ತಾಳಗುಪ್ಪ ತಲುಪಲಿದೆ.
  • ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ. ವಿಶೇಷ ರೈಲು. ಅಕ್ಟೋಬರ್ 18 ಮತ್ತು 25 ರಂದು ಬೆಳಗ್ಗೆ 10.00ಕ್ಕೆ ತಾಳಗುಪ್ಪದಿಂದ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

ಪ್ರಯಾಣಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ವಿನಂತಿ. ಟಿಕೆಟ್ ಬುಕ್ಕಿಂಗ್ ಈಗ ಆರಂಭವಾಗಿದೆ. ಹಬ್ಬದ ಸಂಭ್ರಮವನ್ನು ಮನೆಯವರೊಂದಿಗೆ ಹಂಚಿಕೊಳ್ಳಿ. ಈ ವಿಶೇಷ ರೈಲು ಓಡಿಸಲು ಕ್ರಮ ಕೈಗೊಂಡ ನೈಋತ್ಯ ರೈಲ್ವೆ ವಲಯಕ್ಕೆ ಧನ್ಯವಾದಗಳು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ದೀಪಾವಳಿ ವಿಶೇಷ ರೈಲು: ಮುಂಬರುವ ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ಮಧ್ಯ ರೈಲ್ವೆಯು ಮುಜಫರ್‌ಪುರ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಹಾಗೂ ದಾನಾಪುರ-ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಿದೆ.

  • ರೈಲು ಸಂಖ್ಯೆ 05543/ 05544 ಮುಜಫರ್‌ಪುರ-ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಮುಜಫರ್‌ಪುರ ವಿಶೇಷ ರೈಲು (6 ಟ್ರಿಪ್): ರೈಲು ಸಂಖ್ಯೆ 05543 ಮುಜಫರ್‌ಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 10, 2025 ರಿಂದ ನವೆಂಬರ್ 14, 2025 ರವರೆಗೆ ಪ್ರತಿ ಶುಕ್ರವಾರ 12:45 ಗಂಟೆಗೆ ಮುಜಫರ್‌ಪುರದಿಂದ ಹೊರಡುತ್ತದೆ ಮತ್ತು ಸೋಮವಾರ ಮಧ್ಯಾಹ್ನ 12:20 ಗಂಟೆಗೆ ಎಸ್‌ಎಸ್‌ಎಸ್‌ ಹುಬ್ಬಳ್ಳಿ ತಲುಪುತ್ತದೆ.

ರೈಲು ಸಂಖ್ಯೆ 05544 ಅಕ್ಟೋಬರ್ 14, 2025 ರಿಂದ ನವೆಂಬರ್ 18, 2025 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 09:00 ಗಂಟೆಗೆ ಎಸ್‌ಎಸ್‌ಎಸ್‌ ಹುಬ್ಬಳ್ಳಿಯಿಂದ ಹೊರಡುತ್ತದೆ ಮತ್ತು ಶುಕ್ರವಾರ ಬೆಳಿಗ್ಗೆ 05:00 ಗಂಟೆಗೆ ಮುಜಫರ್‌ಪುರ ತಲುಪುತ್ತದೆ.

ಈ ರೈಲು ಮೋತಿಪುರ, ಚಕಿಯಾ, ಬಾಪುಧಾಮ್‌ ಮೋತಿಹಾರಿ, ಸಗೌಲಿ ಜಂ., ಬೆತ್ತಿಯಾ, ನರ್ಕಟಿಯಾಗಂಜ್ ಜಂ., ಬಗಹಾ, ಕಪ್ತಾನಗಂಜ್‌ ಜಂ., ಗೋರಖ್‌ಪುರ ಜಂ., ಗೋಂಡಾ ಜಂ., ಐಶ್‌ಬಾಗ್, ಕಾನ್ಪುರ ಸೆಂಟ್ರಲ್, ಓರೈ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ, ಬೀನಾ ಜಂ., ಭೋಪಾಲ್ ಜಂ., ಇಟಾರ್ಸಿ ಜಂ., ಆಮ್ಲಾ ಜಂ., ನಾಗ್ಪುರ, ಚಂದ್ರಪುರ, ಬಲ್ಲಾರ್ಷಾ, ರಾಮಗುಂಡಂ, ಕಾಜೀಪೇಟ್ ಜಂ., ಕಾಚೇಗುಡ, ಮಹೆಬೂಬ್‌ ನಗರ, ಧೋಣ, ಧರ್ಮಾವರಂ ಜಂ., ಹಿಂದೂಪುರ, ಯಲಹಂಕ ಜಂ., ತುಮಕೂರು, ಅರಸೀಕೆರೆ ಜಂ., ಬೀರೂರು ಜಂ., ಚಿಕ್ಕಜಾಜೂರು ಜಂ., ದಾವಣಗೆರೆ, ರಾಣೇಬೆನ್ನೂರು ಮತ್ತು ಎಸ್‌ಎಂಎಂ ಹಾವೇರಿ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಹೊಂದಿದೆ.

ಈ ರೈಲು 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 12 ಸ್ಲೀಪರ್ ವರ್ಗ, 4 ಸಾಮಾನ್ಯ ದ್ವಿತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗ ಕೋಚ್ ಸಹಿತ) ಇರಲಿವೆ.

  • ರೈಲು ಸಂಖ್ಯೆ 03261/ 03262 ದಾನಾಪುರ-ಯಶವಂತಪುರ-ದಾನಾಪುರ ವಿಶೇಷ ರೈಲು (12 ಟ್ರಿಪ್) ರೈಲು ಸಂಖ್ಯೆ 03261 ದಾನಾಪುರ-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 11, 2025 ರಿಂದ ಡಿಸೆಂಬರ್ 27, 2025 ರೆವರೆಗೆ ಪ್ರತಿ ಶನಿವಾರ ಬೆಳಿಗ್ಗೆ 10:00 ಗಂಟೆಗೆ ದಾನಾಪುರದಿಂದ ಹೊರಡುತ್ತದೆ ಮತ್ತು ಮಂಗಳವಾರ ರಾತ್ರಿ 09:30 ಗಂಟೆಗೆ ಯಶವಂತಪುರ ತಲುಪುತ್ತದೆ.

ರೈಲು ಸಂಖ್ಯೆ (03262) ಅಕ್ಟೋಬರ್ 14, 2025 ರಿಂದ ಡಿಸೆಂಬರ್ 30, 2025 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 07:00 ಗಂಟೆಗೆ ಯಶವಂತಪುರದಿಂದ ಹೊರಡುತ್ತದೆ ಮತ್ತು ಗುರುವಾರ ಮಧ್ಯಾಹ್ನ 12:00 ಗಂಟೆಗೆ ದಾನಾಪುರ ತಲುಪುತ್ತದೆ.

ಈ ರೈಲು ಅರಾ ಜಂ., ಬಕ್ಸರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂ., ಪ್ರಯಾಗ್‌ರಾಜ್‌ ಛವೋಕಿ ಜಂ., ಮಾಣಿಕ್‌ಪುರ ಜಂ., ಸತ್ನಾ, ಕಟ್ನಿ ಜಂ., ಜಬಲ್‌ಪುರ, ನರಸಿಂಗ್‌ಪುರ, ಪಿಪರಿಯಾ, ಇಟಾರ್ಸಿ ಜಂ., ಆಮ್ಲಾ ಜಂ., ನಾಗ್ಪುರ, ಚಂದ್ರಪುರ, ಬಲ್ಲಾರ್ಷಾ, ರಾಮಗುಂಡಂ, ಕಾಜೀಪೇಟ್ ಜಂ., ಕಾಚೇಗುಡ, ಮಹೆಬೂಬ್‌ನಗರ, ಧೋಣ, ಧರ್ಮಾವರಂ ಜಂ., ಹಿಂದೂಪುರ, ಮತ್ತು ಯಲಹಂಕ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಹೊಂದಿರಲಿದೆ.

ರೈಲು 20 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 9 ಸ್ಲೀಪರ್‌ ವರ್ಗ, 5 ಸಾಮಾನ್ಯ ದ್ವಿತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗ ಕೋಚ್ ಸಹಿತ) ಇರಲಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version